ನೆಲ್ಯಹುದಿಕೇರಿಯಲ್ಲಿ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಸ್ಥಳೀಯರ ಅಸಮಾಧಾನ

Prasthutha|

ಸಿದ್ದಾಪುರ:  ಅಂದಾಜು 2ಕೋಟಿ₹ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಪಟ್ಟಣ ಇದೀಗ ಅವೈಜ್ಞಾನಿಕ ಕಾಮಗಾರಿಯಿಂದ ಟ್ರಾಫಿಕ್ ಸಮಸ್ಯೆ ಸೇರಿದಂತೆ ವರ್ತಕರಿಗೆ ವ್ಯಾಪಾರ ವಹಿವಾಟಿಲ್ಲದೆ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

- Advertisement -

ನಾಗರಿಕ ಹೋರಾಟ ಸಮಿತಿಯ ಪ್ರಮುಖ ಪಿ. ಆರ್ ಭರತ್ ಮಾತನಾಡಿ,  “1 ತಿಂಗಳ ಹಿಂದೆ ನೆಲ್ಯಹುದಿಕೇರಿ ಪಟ್ಟಣ ಅಭಿವೃದ್ಧಿಯಾಗಲಿದೆ ಎಂದು ವರ್ತಕರು ಸ್ವಯಂಪ್ರೇರಿತವಾಗಿ ತಮ್ಮ ಜಾಗವನ್ನು ಬಿಟ್ಟುಕೊಟ್ಟರು. ಅಂದಾಜು  ರೂ 2ಕೋಟಿ ವೆಚ್ಚದಲ್ಲಿ  ಅಗಲೀಕರಣ, ಚರಂಡಿ, ರಸ್ತೆ ಅಭಿವೃದ್ಧಿಯಾಗಲಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಕಾಮಗಾರಿಗೆ ಚಾಲನೆ ನೀಡಿದ್ದರು. ಅಗಲೀಕರಣದ ನೆಪದಲ್ಲಿ ಎರಡೇ ದಿನದಲ್ಲಿ ಅಂಗಡಿ ಮುಂಗಟ್ಟುಗಳ ಮುಂದೆ  ಜೆಸಿಬಿ ಯಂತ್ರ ಬಳಸಿ ಮಣ್ಣು ಚರಂಡಿಯನ್ನು ತೆಗೆಯಲಾಗಿತ್ತು. 10 ದಿನದಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದರು. ಒಂದು ಬದಿಯಲ್ಲಿ ಅವೈಜ್ಞಾನಿಕವಾಗಿ ಕಾಮಗಾರಿ ಪ್ರಾರಂಭಿಸಿ ಇದೀಗ ಸ್ಥಗಿತಗೊಳಿಸಿದ್ದಾರೆ.

ಇದೀಗ ತಿಂಗಳು ಕಳೆದರೂ ಕಾಮಗಾರಿ ಪ್ರಾರಂಭಿಸದೆ ಅಧಿಕಾರಿಗಳು ಇತ್ತಕಡೆ ತಿರುಗಿಯೂ ನೋಡದೆ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಇದರಿಂದ ಪಾರ್ಕಿಂಗ್ ಸಮಸ್ಯೆ, ವಾಹನ ಸಂಚಾರ, ಸಾರ್ವಜನಿಕರು ನಡೆದಾಡಲೂ ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು ವರ್ತಕರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಕೆಲವು ಕಡೆ ಮಾತ್ರ ಚರಂಡಿಗೆ ಮಣ್ಣು ತೆಗೆಯಲಾಗಿದ್ದು ಇನ್ನೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಲ್ಲ.ಮಳೆ ನೀರು ಅಂಗಡಿ ಹಾಗೂ ಮನೆಗಳಿಗೆ ಹೋಗುತ್ತಿದ್ದು ಇದರಿಂದಲೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಗುತ್ತಿಗೆದಾರ ಕಾಮಗಾರಿ ಪ್ರಾರಂಭಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ ಕೂಡಲೇ ಕಾಮಗಾರಿ ಪ್ರಾರಂಭಿಸಿದಿದ್ದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

- Advertisement -

ಈ ಸಂದರ್ಭ ಶಿಯಾಬ್, ಮಂಜು, ಸೌಕತ್, ರಿಯಾಜ್, ಅಜೀಜ್ , ರಮೇಶ್, ಹರೀಶ ,ಜಮೀಲ್, ತಂಗಮ್ಮ, ಜುಬೇರ್, ಇಬ್ರಾಹಿಂ, ಮುಸ್ತಫಾ, ಬಸೀರ್ ಸೇರಿದಂತೆ ಮತ್ತಿತರರು ಇದ್ದರು.

Join Whatsapp
Exit mobile version