Home ಟಾಪ್ ಸುದ್ದಿಗಳು 20 ತಿಂಗಳ ಬಳಿಕ ಬಾಗಿಲು ತೆರೆದ ಅಂಗನವಾಡಿ , LKG, UKG ಕೇಂದ್ರಗಳು | ಚಿಣ್ಣರಲ್ಲಿ...

20 ತಿಂಗಳ ಬಳಿಕ ಬಾಗಿಲು ತೆರೆದ ಅಂಗನವಾಡಿ , LKG, UKG ಕೇಂದ್ರಗಳು | ಚಿಣ್ಣರಲ್ಲಿ ಮೂಡಿದ ಮಂದಹಾಸ

ಬೆಂಗಳೂರು: ಇಪ್ಪತ್ತು ತಿಂಗಳ ಬಳಿಕ ರಾಜ್ಯದಲ್ಲಿ ಅಂಗನವಾಡಿ ಕೇಂದ್ರಗಳು ಹಾಗೂ ಪೂರ್ವ ಪ್ರಾಥಮಿಕ ತರಗತಿಗಳು (ಎಲ್ಕೆಜಿ-ಯುಕೆಜಿ) ಆರಂಭವಾಗಿದ್ದು, ಚಿಣ್ಣರನ್ನು ಬರಮಾಡಿಕೊಳ್ಳಲು ಶಾಲೆ, ಅಂಗನವಾಡಿ ಕೇಂದ್ರಗಳನ್ನು ಶೃಂಗಾರಗೊಳಿಸಿ ಅಲಂಕರಿಸಲಾಗಿದೆ. ಕೋವಿಡ್ ಕಾರಣದಿಂದ 20 ತಿಂಗಳ ಕಾಲ ಮುಚ್ಚಿದ್ದ ಎಲ್ ಕೆಜಿ, ಯುಕೆಜಿ ಅಂಗನವಾಡಿ ಕೇಂದ್ರಗಳು ಈಗ ಸರ್ಕಾರದ ಅನುಮತಿಯೊಂದಿಗೆ ಬಾಗಿಲು ತೆರೆದಿವೆ.


ಕಳೆದ ಆಗಸ್ಟ್ ನಿಂದ ಹಂತ ಹಂತವಾಗಿ 1ರಿಂದ 12ನೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳು ಆರಂಭಗೊಂಡಿದ್ದವು, ಈಗ ಸರಕಾರವು ಎಲ್ ಕೆಜಿ, ಯುಕೆಜಿ ಆರಂಭಕ್ಕೂ ಗ್ರೀನ್ ಸಿಗ್ನಲ್ ನೀಡಿದ್ದು, ಮೊದಲ ಹಂತದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ 12ರವರೆಗೆ ಕೇವಲ ಎರಡು ಗಂಟೆ ಮಾತ್ರ ಕಲಿಕಾ ಚಟುವಟಿಕೆಗಳು ನಡೆಯುತ್ತವೆ. ಈಗಾಗಲೇ ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 3.30ವರೆಗೆ ಭೌತಿಕ ತರಗತಿ ನಡೆಸಲು ಸರ್ಕಾರ ಅವಕಾಶ ನೀಡಿದೆ.


ಚಿಣ್ಣರ ಸುರಕ್ಷತೆಗಾಗಿ ಅಂಗನವಾಡಿ, ಶಾಲಾವರಣ, ಕೊಠಡಿ, ಪೀಠೋಪಕರಣಗಳನ್ನು ಶಿಕ್ಷಕರು, ಸಿಬ್ಬಂದಿ ಸ್ವಚ್ಛಗೊಳಿಸಿ ಸ್ಯಾನಿಟೈಸಿಂಗ್ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಮಕ್ಕಳು ತಮ್ಮ ಪೋಷಕರೊಂದಿಗೆ ಎಲ್ ಕೆಜಿ, ಯುಕೆಜಿ ತರಗತಿಗೆ ಬರುತ್ತಿದ್ದ ದೃಶ್ಯ ಕಂಡುಬಂತು. ಸಿದ್ಧತೆ ಪೂರ್ಣಗೊಳ್ಳದ ಕೆಲವು ಶಾಲೆಗಳು ನವೆಂಬರ್ 11ರಿಂದ ಎಲ್ ಕೆಜಿ ಯುಕೆಜಿ ತರಗತಿ ಆರಂಭಿಸಲು ತೀರ್ಮಾನಿಸಿವೆ.

Join Whatsapp
Exit mobile version