Home ರಾಜ್ಯ ಸುಂಟಿಕೊಪ್ಪ | 20 ತಿಂಗಳ ಬಳಿಕ ಅಂಗನವಾಡಿ ಕೇಂದ್ರಗಳಲ್ಲಿ ಚಿಣ್ಣರ ಕಲರವ

ಸುಂಟಿಕೊಪ್ಪ | 20 ತಿಂಗಳ ಬಳಿಕ ಅಂಗನವಾಡಿ ಕೇಂದ್ರಗಳಲ್ಲಿ ಚಿಣ್ಣರ ಕಲರವ

ಸುಂಟಿಕೊಪ್ಪ: ಕೋವಿಡ್ ಕಾರಣದಿಂದ ಬಾಗಿಲು ಮುಚ್ಚಿದ್ದ ಅಂಗನವಾಡಿ ಕೇಂದ್ರಗಳು ಸುಮಾರು 20 ತಿಂಗಳ ಬಳಿಕ ಇಂದು ಆರಂಭಗೊಂಡಿತು. ಸರಕಾರದ ಅನುಮತಿಯೊಂದಿಗೆ  ಅಂಗನವಾಡಿ, ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳು ಆರಂಭವಾಗಿದ್ದು ಸುಂಟಿಕೊಪ್ಪ ವ್ಯಾಪ್ತಿಯ 9 ಅಂಗನವಾಡಿ ಕೇಂದ್ರಗಳಿಗೆ ಚಿಣ್ಣರು ಹಾಜರಾದರು.


ಕೋವಿಡ್ ನಿಯಮಾವಳಿಗಳ ಅನುಸಾರ ಅಂಗನವಾಡಿಯನ್ನು ಶುಚಿಗೊಳಿಸಿ ಸ್ಯಾನಿಟೈಸರ್ ಮಾಡಿಕೊಂಡು ಮಕ್ಕಳನ್ನು ಸ್ವಾಗತಿಸಲಾಯಿತು. ಎಲ್ಲಾ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು, ಸಾಬೂನು ಬಳಸಿ ಬಿಸಿ ನೀರಿನಲ್ಲಿ ಕೈಯನ್ನು ತೊಳೆಯುವ ವ್ಯವಸ್ಥೆಯನ್ನು ಮಾಡಲಾಗಿದೆ.

ವಿಶೇಷವೆಂದರೆ ಸುಂಟಿಕೊಪ್ಪದ ಗುಡ್ಡಪ್ಪ ರೈ ಬಡಾವಣೆಯ ಅಂಗನವಾಡಿ ಕೇಂದ್ರವನ್ನು ಚಿಣ್ಣರೇ ಉದ್ಘಾಟಿಸಿದರು. ಸುಂಟಿಕೊಪ್ಪ ಗ್ರಾ.ಪಂಚಾಯತ್ ಸದಸ್ಯರುಗಳಾದ ಪಿ.ಎಫ್.ಸಬಾಸ್ಟಿನ್, ಸೋಮನಾಥ್ ಮಕ್ಕಳಿಗೆ ಸಿಹಿ ತಿಂಡಿಗಳನ್ನು ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

Join Whatsapp
Exit mobile version