Home ಟಾಪ್ ಸುದ್ದಿಗಳು ಮುನಿಸಿಕೊಂಡ ಶಿಕ್ಷಕಿಯನ್ನು ಮುದ್ದಾಡಿ ಕ್ಷಮೆ ಕೇಳಿದ ಪುಟ್ಟ ವಿದ್ಯಾರ್ಥಿ

ಮುನಿಸಿಕೊಂಡ ಶಿಕ್ಷಕಿಯನ್ನು ಮುದ್ದಾಡಿ ಕ್ಷಮೆ ಕೇಳಿದ ಪುಟ್ಟ ವಿದ್ಯಾರ್ಥಿ

ನವದೆಹಲಿ: ಮುನಿಸಿಕೊಂಡ ಶಿಕ್ಷಕಿಯನ್ನು ಪುಟ್ಟ ವಿದ್ಯಾರ್ಥಿಯೋರ್ವ ಕ್ಷಮೆ ಕೇಳಿ ಮುದ್ದಾಡಿ ಸಮಾಧಾನಗೊಳಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ವೈರಲ್ ವೀಡಿಯೋದಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ಶಿಕ್ಷಕಿಗೆ ಬಾಲಕ ಕ್ಷಮೆ ಕೇಳುತ್ತಾ, ಮತ್ತೆ ಇಂತಹ ತಪ್ಪನ್ನು ಮಾಡುವುದಿಲ್ಲ ಎಂದು ಭರವಸೆ ನೀಡುತ್ತಾನೆ. ನೀನು ತಪ್ಪನ್ನು ಮಾಡುವುದಿಲ್ಲ ಎನ್ನುತ್ತೀಯಾ ಮತ್ತೆ ಮಾಡುತ್ತೀಯಾ, ಹೋಗು ನಾನು ನಿನ್ನ ಜೊತೆ ಮಾತನಾಡುವುದಿಲ್ಲ. ಈ ಹಿಂದೆಯೂ ಮತ್ತೆ ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದೆ. ಆದರೆ ಮತ್ತೆ ಮಾಡುತ್ತೀಯಾ ಎಂದು ಶಿಕ್ಷಕಿ ಹುಸಿ ಮುನಿಸಿನಿಂದ ಹೇಳಿದಾಗ ಆಕೆಯನ್ನು ತಬ್ಬಿದ ಪುಟ್ಟ ಬಾಲಕ, ಕೆನ್ನೆಗೆ ಅನೇಕ ಬಾರಿ ಮುತ್ತು ನೀಡುತ್ತಾನೆ. ವಿದ್ಯಾರ್ಥಿ ಮತ್ತು ಪುಟ್ಟ ವಿದ್ಯಾರ್ಥಿಗಳೊಂದಿಗೆ ಒಡಹುಟ್ಟಿದವಳ ರೀತಿಯ ಶಿಕ್ಷಕಿಯ ವರ್ತನೆ ಮೆಚ್ಚುಗೆ ವ್ಯಕ್ತವಾಗಿದೆ.

Join Whatsapp
Exit mobile version