Home ಟಾಪ್ ಸುದ್ದಿಗಳು ವಿರೋಧದ ಮಧ್ಯೆ ಮದ್ಯದಂಗಡಿ ಆರಂಭ: ಅಂಗಡಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ ಮಹಿಳೆಯರು

ವಿರೋಧದ ಮಧ್ಯೆ ಮದ್ಯದಂಗಡಿ ಆರಂಭ: ಅಂಗಡಿಗೆ ನುಗ್ಗಿ ಪೀಠೋಪಕರಣ ಧ್ವಂಸ ಮಾಡಿದ ಮಹಿಳೆಯರು

ಚಿಕ್ಕಮಗಳೂರು: ಹೊಸದಾಗಿ ಮದ್ಯದಂಗಡಿ ತೆರೆದುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಮಹಿಳೆಯರು ಮದ್ಯದ ಅಂಗಡಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿ ನಡೆದಿದೆ.

ವಿರೋಧದ ಮಧ್ಯೆಯೂ ಮದ್ಯದಂಗಡಿ ತೆರೆದ ಹಿನ್ನೆಲೆಯಲ್ಲಿ ಕೋಪಗೊಂಡ 50ಕ್ಕೂ ಹೆಚ್ಚು ಮಹಿಳೆಯರು ಮದ್ಯದಂಗಡಿಗೆ ನುಗ್ಗಿ, ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಲಾಗಿದೆ. ಬಾರ್ ತೆರೆಯದಂತೆ ಮುಸ್ಲಾಪೂರದ ಮಹಿಳೆಯರು ಈ ಹಿಂದೆ ಪ್ರತಿಭಟನೆ ನಡೆಸಿದ್ದರು. ವಿರೋಧದ ಮಧ್ಯೆಯೂ ಬಾರ್ ತೆರೆದ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದೆ. ಕಡೂರು ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version