Home ಟಾಪ್ ಸುದ್ದಿಗಳು ಮದ್ಯ ನೀತಿ ಹಗರಣ: 30 ಕಡೆಗಳಲ್ಲಿ ಇಡಿ ದಾಳಿ

ಮದ್ಯ ನೀತಿ ಹಗರಣ: 30 ಕಡೆಗಳಲ್ಲಿ ಇಡಿ ದಾಳಿ

ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇಡಿ)ಅಧಿಕಾರಿಗಳು ಸುಮಾರು 30 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ.


ರಾಜಧಾನಿ ದೆಹಲಿಯನ್ನು ಹೊರತುಪಡಿಸಿ, ಯುಪಿಯ ರಾಜಧಾನಿ ಲಕ್ನೋ, ಹರಿಯಾಣದ ಗುರುಗ್ರಾಮ್, ಚಂಡೀಗಢ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರು ಸೇರಿದಂತೆ 30 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.


ಅಬಕಾರಿ ನೀತಿಯಲ್ಲಿನ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಇಡಿಯ ಸುಮಾರು 150 ಅಧಿಕಾರಿಗಳು 30 ಸ್ಥಳಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.


ಮೆಸರ್ಸ್ ಇಂಡೋ ಸ್ಪಿರಿಟ್ ಎಂಡಿಯಾಗಿರುವ ಈ ಪ್ರಕರಣದ ಆರೋಪಿ ಸಮೀರ್ ಮಹೀಂದ್ರ ಅವರ ನಿವಾಸಗಳ ಮೇಲೂ ಇಡಿ ದಾಳಿ ನಡೆಸಿದೆ.

Join Whatsapp
Exit mobile version