Home ಟಾಪ್ ಸುದ್ದಿಗಳು ಟ್ರಾಫಿಕ್ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ ಲಿಂಬಾವಳಿ ಪುತ್ರಿ: ಪ್ರಕರಣ ದಾಖಲಿಸದೆ ಬಿಟ್ಟ ಪೊಲೀಸರು

ಟ್ರಾಫಿಕ್ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದ ಲಿಂಬಾವಳಿ ಪುತ್ರಿ: ಪ್ರಕರಣ ದಾಖಲಿಸದೆ ಬಿಟ್ಟ ಪೊಲೀಸರು

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಟ್ರಾಫಿಕ್ ಪೊಲೀಸರು ಕಾರು ತಡೆದ ಹಿನ್ನೆಲೆಯಲ್ಲಿ ಪೊಲೀಸರಿಗೆ ಆವಾಜ್ ಹಾಕಿದ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿಗೆ 10,000 ರೂ. ದಂಡ ವಿಧಿಸಿ ಯಾವುದೇ ಪ್ರಕರಣ ದಾಖಲಿಸದೆ ಕಳುಹಿಸಿ ಕೊಡಲಾಗಿದೆ.

ರ‍್ಯಾಷ್ ಡ್ರೈವಿಂಗ್ ಮಾಡಿಕೊಂಡು ಬಂದಿದ್ದಲ್ಲದೆ ಟ್ರಾಫಿಕ್ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ನಾನು MLA ಅರವಿಂದ ಲಿಂಬಾವಳಿ ಮಗಳು ಗೊತ್ತಾ? ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಾರೆ. ಅಲ್ಲದೆ ಇದು MLA ಗಾಡಿ, ನಾನು ಅರವಿಂದ ಲಿಂಬಾವಳಿ ಅವರ ಪುತ್ರಿ ಎಂದು ವಾಗ್ವಾದ ನಡೆಸಿದ್ದಾರೆ

ಪೊಲೀಸರಿಗೂ ಕೇರ್ ಮಾಡದೇ ಪೊಲೀಸರ ಮೇಲೆಯೇ ಕಾರು ಹತ್ತಿಸುವಂತೆ ಕಾರು ಚಲಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬೆನ್ನತ್ತಿದ ಪೊಲೀಸರನ್ನು ನೋಡಿ ಕ್ಯಾಪಿಟಲ್ ಹೋಟೆಲ್ ಒಳಗೆ ಕಾರು ಚಲಾಯಿಸಿದ್ದಾರೆ. ಕಾರು ವಾಪಸ್ ಬರುತ್ತಿದ್ದ ವೇಳೆ ಹೋಟೆಲ್ ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ. ಶಾಸಕರ ಪುತ್ರಿ ಎಂದು ಅರಿವಾಗುತ್ತಿದ್ದಂತೆ ಯಾವುದೇ ಪ್ರಕರಣ ದಾಖಲಿಸದೆ ಪೊಲೀಸರು ಕಳುಹಿಸಿ ಕೊಟ್ಟಿದ್ದಾರೆ.

Join Whatsapp
Exit mobile version