Home ಟಾಪ್ ಸುದ್ದಿಗಳು ಚಾಮರಾಜನಗರ: ಲಘು ವಿಮಾನ ಪತನ

ಚಾಮರಾಜನಗರ: ಲಘು ವಿಮಾನ ಪತನ

ಚಾಮರಾಜನಗರ: ತರಬೇತಿ ನಿರತ ಲಘು ವಿಮಾನವೊಂದು ಪತನವಾದ ಘಟನೆ ಚಾಮರಾಜನಗರ ತಾಲೂಕಿನ ಎಚ್ ಮೂಕಳ್ಳಿ ಬಳಿ ಗುರುವಾರ ನಡೆದಿದೆ.


ಇಬ್ಬರು ಪೈಲಟ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಜೆಟ್ ವಿಮಾನ ಪತನಗೊಂಡು, ಹೊತ್ತಿ ಉರಿದಿದೆ. ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಪ್ಯಾರಾಚೂಟ್ ಬಳಸಿ ವಿಮಾನದಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ.


ಘಟನಾ ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Join Whatsapp
Exit mobile version