Home ಟಾಪ್ ಸುದ್ದಿಗಳು ದಿವಂಗತ ಮುಲಾಯಂ ಸಿಂಗ್ ಗೆ ‘ಭಾರತ ರತ್ನ’ ನೀಡುವಂತೆ ರಾಷ್ಟ್ರಪತಿಗೆ ಪತ್ರ

ದಿವಂಗತ ಮುಲಾಯಂ ಸಿಂಗ್ ಗೆ ‘ಭಾರತ ರತ್ನ’ ನೀಡುವಂತೆ ರಾಷ್ಟ್ರಪತಿಗೆ ಪತ್ರ

ಲಕ್ನೋ: ಆರೋಗ್ಯ ಸಮಸ್ಯೆಯಿಂದ ಇತ್ತೀಚೆಗೆ ಅಸ್ತಂಗತರಾದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರಶಸ್ತಿ ನೀಡುವಂತೆ ಸಮಾಜ ವಾದಿ ಪಕ್ಷದ ಮುಖಂಡರೊಬ್ಬರು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ ಬರೆದಿದ್ದಾರೆ.

ಸಮಾಜವಾದದ ಪರಿಕಲ್ಪನೆಯಿಂದ ಸಾಮಾಜಿಕ ನ್ಯಾಯಕ್ಕಾಗಿ ಐತಿಹಾಸಿಕ ಹೋರಾಟ ನಡೆಸಿದ್ದ ಮಹಾನ್ ರಾಜಕಾರಣಿ ಮುಲಾಯಂ ಅವರು, ತಮ್ಮ ಜೀವನವನ್ನು ದೇಶದ ಏಳಿಗೆಗಾಗಿ ಸಮರ್ಪಿಸಿದ್ದರು. ಎಂದು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಸಮಾಜ ವಾದಿ ಪಕ್ಷದ ಮುಖಂಡ ಐ ಪಿ ಸಿಂಗ್ ಉಲ್ಲೇಖಿಸಿದ್ದಾರೆ.

ಒಂದು ಬಾರಿ ರಕ್ಷಣಾ ಸಚಿವರೂ, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯೂ ಆಗಿ ಸುದೀರ್ಘ ಕಾಲದ ವರೆಗೆ ರಾಷ್ಟ್ರರಾಜಕಾರಣದಲ್ಲಿ ತೊಡಗಿಸುವ ಮೂಲಕ ಬಡವರ ಆಶಾಕಿರಣಕ್ಕೆ ಸ್ಪಂದಿಸಿದ ಮುಲಾಯಂ ಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೋರಿದ್ದಾರೆ.

Join Whatsapp
Exit mobile version