ಹೊಸ ವಿಶ್ವಾಸ, ಮನೋಭಾವದೊಂದಿಗೆ ಹೊಸ ಸಂಸತ್ತಿಗೆ ಹೊರಡೋಣ : ಪ್ರಧಾನಿ ಮೋದಿ

Prasthutha|

ನವದೆಹಲಿ: ಸೋಮವಾರ ಹಳೆಯ ಸಂಸತ್ ಸಂಸತ್ ಭವನದಲ್ಲಿ ಕೊನೆಯ ಅಧಿವೇಶನದ ದಿನವಾದ ಕಾರಣ ನರೇಂದ್ರ ಮೋದಿ ಅವರು ಹಲವರಿಗೆ ಧನ್ಯವಾದ ತಿಳಿಸಿದರು.

- Advertisement -


ಹಳೆಯ ಸಂಸತ್ ಭವನವು ಕಳೆದ 75 ವರ್ಷದಲ್ಲಿ ದೇಶದ ವಿಕಾಸಕ್ಕೆ ಕಾರಣವಾಗಿದೆ. ದೇಶದ ಎಲ್ಲರಿಗೂ ಸೌಲಭ್ಯ ನೀಡಿದೆ. ಬಡವರು, ದಲಿತರು, ತುಳಿತಕ್ಕೊಳಗಾದವರ ಭವಿಷ್ಯಕ್ಕೆ ಅಡಿಗಲ್ಲು ಹಾಕಿದೆ. ಇದೇ ಸಂಸತ್ನಲ್ಲಿ ಸಂವಿಧಾನ ರಚನೆಗೆ 2 ವರ್ಷ 11 ತಿಂಗಳು ಸಭೆ ನಡೆಸಲಾಗಿದೆ. ಎಂದರು.


ನಾವು ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಹೊಸ ಸಂಸತ್ತಿಗೆ ಹೋಗೋಣ. ಎಲ್ಲರೂ ಹೊಸ ವಿಶ್ವಾಸ, ಮನೋಭಾವದೊಂದಿಗೆ ಹೊಸ ಸಂಸತ್ತಿಗೆ ಹೊರಡೋಣ. ಎಲ್ಲ ಸದಸ್ಯರು ಕೂಡ ತಮ್ಮ ಅನುಭವಗಳನ್ನು ಜನರಿಗೆ ತಿಳಿಸಿ ಎಂಬುದಾಗಿ ಮನವಿ ಮಾಡಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

- Advertisement -