Home ಟಾಪ್ ಸುದ್ದಿಗಳು ದಿರ್ಹಮ್ ಮೂಲಕ ವಹಿವಾಟು ನಡೆಸೋಣ: ಭಾರತಕ್ಕೆ ರಷ್ಯಾ ಮನವಿ

ದಿರ್ಹಮ್ ಮೂಲಕ ವಹಿವಾಟು ನಡೆಸೋಣ: ಭಾರತಕ್ಕೆ ರಷ್ಯಾ ಮನವಿ

ನವದೆಹಲಿ: ಭಾರತವು ತರಿಸಿಕೊಳ್ಳುತ್ತಿರುವ ಪೆಟ್ರೋಲಿಯಂ ಕಚ್ಚಾ ತೈಲದ ದರವನ್ನು ತಮಗೆ ಯುನೈಟೆಡ್ ಅರಬ್ ಎಮಿರೇಟ್ಸ್ ನ ದಿರ್ಹಮ್ ಮೂಲಕ ಸಲ್ಲಿಸುವಂತೆ ರಷ್ಯಾ ಭಾರತಕ್ಕೆ ಮನವಿ ಮಾಡಿದೆ.

ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳ ಆರ್ಥಿಕ ನಿರ್ಬಂಧ ಎದುರಿಸುತ್ತಿರುವ ರಷ್ಯಾ, ರೂಬಲ್ ಇಲ್ಲವೇ ತಮಗನುಕೂಲದ ಕರೆನ್ಸಿಯಲ್ಲಿ ಹಣ ಸಲ್ಲಿಸುವಂತೆ ಬಾರತ ಸೇರಿದಂತೆ ಕಳೆದ ಆರು ತಿಂಗಳಿನಿಂದ ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವವರೊಂದಿಗೆ ಮನವಿ ಮಾಡಿದೆ.

ಫೆಬ್ರವರಿಯಿಂದ ಉಕ್ರೆನ್ ಜೊತೆ ರಷ್ಯಾ ಯುದ್ಧದಲ್ಲಿ ತೊಡಗಿರುವುದರಿಂದ ಯುಎಸ್ ಎ ಮತ್ತು ಪಾಶ್ಚಾತ್ಯ ದೇಶಗಳಿಂದ ಆರ್ಥಿಕ ನಿರ್ಬಂಧಕ್ಕೆ ಒಳಪಟ್ಟಿದೆ.

ಸಾಮಾನ್ಯವಾಗಿ ಪೆಟ್ರೋಲಿಯಂ ಕಚ್ಚಾ ತೈಲದ ಬೆಲೆ ಡಾಲರ್ ಲೆಕ್ಕದಲ್ಲಿದ್ದು ಡಾಲರ್ ನಲ್ಲಿ ಸಲ್ಲಿಸುವುದು ಸಾಮಾನ್ಯ. ವಿಶೇಷ ಸಂದರ್ಭಗಳಲ್ಲಿ ಸಮಾನ ಬದಲಿ ಹಣವನ್ನು ರಫ್ತುದಾರ ಕೇಳಲವಕಾಶವಿದೆ. ಆಮದು ಮಾಡಿಕೊಳ್ಳುವ ದೇಶವು ಇದಕ್ಕೆ ಸ್ಪಂದಿಸದಿದ್ದರೆ ಕಚ್ಚಾ ತೈಲ ಪೂರೈಕೆ ನಿಲ್ಲಬಹುದು.

ಚೀನಾದ ಬಳಿಕ ಇತ್ತೀಚಿನ ವರ್ಷಗಳಲ್ಲಿ ಭಾರತವೇ ರಷ್ಯಾದಿಂದ ಪೆಟ್ರೋಲಿಯಂ ಆಮದು ಮಾಡಿಕೊಳ್ಳುತ್ತಿರುವ ಎರಡನೆಯ ಸ್ಥಾನದಲ್ಲಿರುವ ದೇಶವಾಗಿದೆ.

ರಷ್ಯಾದ ಪ್ರಮುಖ ತೈಲ ಸಂಸ್ಥೆ ರೊಸ್ನೆಫ್ಟ್ ಭಾರತಕ್ಕೆ ಎವರೆಸ್ಟ್ ಎನರ್ಜಿ ಮತ್ತು ಕೋರಲ್ ಎನರ್ಜಿ ಮೂಲಕ ಕಚ್ಚಾ ತೈಲ ಪೂರೈಸುತ್ತಿದೆ. ಕೊಲ್ಲಿ ದೇಶಗಳಿಗಿಂತ ಭಾರತಕ್ಕೆ ರಷ್ಯಾದಿಂದ ತೈಲ ತರಲು ಹೆಚ್ಚು ವೆಚ್ಚ ಆಗುತ್ತದಾದರೂ ಕಳೆದ ಮೂರು ತಿಂಗಳುಗಳಿಂದ ರಷ್ಯವು ರಿಯಾಯತಿ ದರದಲ್ಲಿ ಭಾರತಕ್ಕೆ ತೈಲ ಪೂರೈಸುತ್ತಿದೆ.

ಭಾರತದ ಎರಡು ರಿಫೈನರಿಗಳು ಈಗಾಗಲೇ ರಷ್ಯಾಕ್ಕೆ ದಿರ್ಹಮ್ ನಲ್ಲಿ ಪೇಮೆಂಟ್ ಮಾಡಿವೆ. ಉಳಿದವು ಸಾಕಷ್ಟು ದಿರ್ಹಮ್ ಸಿಗದ ಹಿನ್ನೆಲೆಯಲ್ಲಿ ಸಮಯಾವಕಾಶ ಕೇಳಿವೆ ಎನ್ನಲಾಗಿದೆ. 

ದುಬೈಯಲ್ಲಿರುವ ಮಶ್ರೆಕ್ ಬ್ಯಾಂಕ್ ಮತ್ತು ಮಜ್ಪೋಮ್ ಬ್ಯಾಂಕು ಶಾಖೆಗಳ ಮೂಲಕ ಪೇಮೆಂಟ್ ಮಾಡುವಂತೆ ಇನ್ವಾಯ್ಸ್ ಬಂದಿದೆ.

ಯುಎಇ ಅಲಿಫ್ತತೆ ಕಾಯ್ದುಕೊಂಡಿರುವುದರಿಂದ ರಷ್ಯಾ ಈ ರೀತಿ ಹಣ ಪಡೆಯಲು ಹೊರಟಿದೆ. ಸೌದಿ ಅರೇಬಿಯಾದಿಂದ ಹಿಂದೆ ಭಾರತ ಅತಿ ಹೆಚ್ಚು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತಿತ್ತು. ಈಗ ಅದು ರಷ್ಯಾದ ರಿಯಾಯತಿಯಿಂದಾಗಿ ಎರಡನೇ ಸ್ಥಾನಕ್ಕೆ ನಿಂತಿದೆ. 

ಭಾರತದ ಕೇಂದ್ರೀಯ ಬ್ಯಾಂಕು ಹೊಸ ರೂಪಾಯಿ ಮೂಲಕ ಸಲ್ಲಿಸುವ ಪದ್ಧತಿಯನ್ನೂ ಜಾರಿಗೆ ತಂದಿದೆಯಾದರೂ ರಶಿಯಾ ಮತ್ತು ಇರಾನ್ ಗಳು ಪಾಶ್ಚಾತ್ಯ ದೇಶಗಳ ಆರ್ಥಿಕ ನಿರ್ಬಂಧ ಎದುರಿಸುತ್ತಿರುವುದರಿಂದ ಹಣ ಸಲ್ಲಿಸಲು ತಮ್ಮದೇ ವಿಧಾನಗಳನ್ನು ಹೇಳುತ್ತವೆ

Join Whatsapp
Exit mobile version