ಕಲಬುರಗಿ: ಬಸನಗೌಡ ಪಾಟೀಲ್ ಯತ್ನಾಳ್ ಗೆ ಮಾಡಲು ಕೆಲಸ ಇಲ್ಲ, ಬಸ್ ನಿಲ್ದಾಣದಲ್ಲಿ ಕುಳಿತು ಜ್ಯೋತಿಷ್ಯ ಹೇಳೋಕೆ ಹೇಳಿ ಎಂದು ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಸರ್ಕಾರ ಪತನವಾಗುತ್ತೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಜನರನ್ನ ಹುಚ್ಚರನ್ನಾಗಿ ಮಾಡ್ತಿದೆ ಎಂಬ ಸಂಸದ ಹೆಗೆಡೆ ಹೇಳಿಕೆಗೆ ತಿರುಗೇಟು ನೀಡಿದ ಮಧು ಬಂಗಾರಪ್ಪ, ಹೆಗಡೆ ದೊಡ್ಡ ಹುಚ್ಚ, ಏಲೆಕ್ಷನ್ ಬರೋವರೆಗೂ ಮಲ್ಕೊಂಡಿರುತ್ತಾನೆ, ಏಲೆಕ್ಷನ್ ಬಂದ ತಕ್ಷಣ ಎದ್ದು ಬರ್ತಾನೆ. ಈ ಭಾರಿ ಆತನನ್ನ ರಾಜಕೀಯವಾಗಿ ಪರ್ಮನೆಂಟ್ ಆಗಿ ಮಲಗಿಸುತ್ತೇವೆ. ಏಕವಚನದಲ್ಲಿ ಮಾತನಾಡೋದೆ ಅವರ ಮನೆ ಸಂಸ್ಕೃತಿ ಎಂದು ಹೆಗಡೆ ವಿರುದ್ದ ಮಧುಬಂಗಾರಪ್ಪ ವಾಗ್ದಾಳಿ ನಡೆಸಿದರು.