Home ಟಾಪ್ ಸುದ್ದಿಗಳು ದ್ರಾವಿಡರು ಮೂಲ ನಿವಾಸಿಗಳಲ್ಲ ಎಂಬುದನ್ನು ಸಾಬೀತುಪಡಿಸಲಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲು

ದ್ರಾವಿಡರು ಮೂಲ ನಿವಾಸಿಗಳಲ್ಲ ಎಂಬುದನ್ನು ಸಾಬೀತುಪಡಿಸಲಿ: ಬಿಜೆಪಿಗೆ ಸಿದ್ದರಾಮಯ್ಯ ಸವಾಲು

ಚನ್ನರಾಯಪಟ್ಟಣ: ದ್ರಾವಿಡರು ಈ ದೇಶದ ಮೂಲ ನಿವಾಸಿಗಳಲ್ಲ ಎಂಬುದನ್ನು ಬಿಜೆಪಿಯವರು ಸಾಬೀತುಪಡಿಸಲಿ ಎಂದು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಯರು ಸಾವಿರಾರು ವರ್ಷಗಳ ಹಿಂದೆ ಮಧ್ಯ ಏಷ್ಯಾದಿಂದ ಬಂದವರು. ಅವರು ಭಾರತೀಯರಾಗಿದ್ದಾರೆ. ನಮ್ಮದೇನು ತಕರಾರು ಇಲ್ಲ, ನಾವ್ಯಾರು ಕೂಡ ಅವರ ರೀತಿಯಲ್ಲಿ ಹೊರಗಡೆ ಹೋಗಿ ಎಂದು ಹೇಳುವುದಿಲ್ಲ. ಅವರು ಈಗ ಭಾರತೀಯರಾಗಿದ್ದಾರೆ, ಆದ್ದರಿಂದ ಅವರು ಇಲ್ಲೇ ಇರಬೇಕು ಎಂದು ಹೇಳಿದ್ದೀನಿ. ಆರೆಸ್ಸೆಸ್  ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೀನಿ. ಸಿಎಂ ಬೊಮ್ಮಾಯಿ ಪ್ರಶ್ನೆಗೆ ನಾನು ದ್ರಾವಿಡ ಪಂಥಕ್ಕೆ ಸೇರಿದವನು ಎಂದು ಹೇಳಿದ್ದೀನಿ, ಇದರಲ್ಲಿ ತಪ್ಪೇನಿದೆ. ದ್ರಾವಿಡರು ಈ ದೇಶದ ಮೂಲ ನಿವಾಸಿಗಳು ಎಂದು ಹೇಳಿದ್ದೇನೆ, ಅದು ಸತ್ಯ ಅಲ್ಲದಿದ್ದರೆ ಸಾಬೀತು ಪಡಿಸಲಿ ಎಂದರು.

ಕಾಂಗ್ರೆಸ್ ವರಿಷ್ಠರ ಮೂಲ ಎಲ್ಲಿಯದು ಎಂಬ ಸಂಸದ ಪ್ರತಾಪ್ ಸಿಂಹ ಪ್ರಶ್ನೆಗೆ ಉತ್ತರಿಸಿದ ಅವರು, ಇಟಲಿಯವರು  ಇಲ್ಲಿ ಬಂದು ಸಿಟಿಜನ್ ಶಿಫ್ ತೆಗೆದುಕೊಂಡು ಈ ದೇಶದವರಾಗಿದ್ದಾರೆ. ಈ ದೇಶದವರನ್ನು ಮದುವೆಯಾಗಿದ್ದಾರೆ, ಇವಾಗ ದೇಶ ಬಿಟ್ಟು ಓಡಿ ಹೋಗಬೇಕಾ? ಈ ದೇಶದವರನ್ನು ಮದುವೆಯಾಗಿ ಇಲ್ಲಿ ಇರಬೇಕೋ, ಬೇಡವೋ? ನಮ್ಮ ದೇಶದವರು ಅಮೇರಿಕ, ಲಂಡನ್ ಸೇರಿದಂತೆ ಬೇರೆ ದೇಶಗಳಿಗೆ ಹೋಗಿದ್ದಾರೆ. ಅವರೆಲ್ಲಾ ಅಲ್ಲಿ ಸಿಟಿಜನ್ ಆಗಿದ್ದಾರೆ, ಅವರನ್ನು ಏನಂತ ಕರಿಬೇಕು, ಅವರನ್ನೆಲ್ಲಾ ಅಲ್ಲಿಂದ ಓಡಿಸಬೇಕಾ? ಅವರು ಇಟಲಿ ದೇಶದವರು, ಇಲ್ಲಿ ಬಂದು ಭಾರತದ ರಾಜೀವ್ ಗಾಂಧಿ ಅವರನ್ನು ಮದುವೆಯಾಗಿ ಈ ದೇಶದವರಾಗಿದ್ದಾರೆ, ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಸಚಿವ ಸೋಮಶೇಖರ್ ಬಗ್ಗೆ ವ್ಯಂಗ್ಯ:

ಆರೆಸ್ಸೆಸ್  ಬಗ್ಗೆ ಸಿದ್ದರಾಮಯ್ಯಗೆ ಏನೂ ಗೊತ್ತಿಲ್ಲ ಎನ್ನುವ ಸಚಿವ ಎಸ್.ಟಿ ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ ಎಸ್.ಟಿ.ಸೋಮಶೇಖರ್ ಕಾಂಗ್ರೆಸ್ ನಲ್ಲಿ ಇದ್ದವರು, ನಮ್ಮ ಜೊತೆ ಇದ್ದವರು. ಅಲ್ಲಿಗೆ ಹೋಗಿ ಆರೆಸ್ಸೆಸ್ ನವರನ್ನು ಹೊಗಳಲು ಶುರು ಮಾಡಿದ್ದಾರೆ. ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರ್ಪಡೆಗೊಂಡು ಮಿನಿಸ್ಟರ್ ಆಗಿದ್ದಾರೆ. ಅವರಿಗೆ ಆರೆಸ್ಸೆಸ್ ನಲ್ಲಿ ತರಬೇತಿ ಆಗಿಲ್ಲ ಎಂದು ವ್ಯಂಗ್ಯ ಮಾಡಿದರು.

ಈಶ್ವರಪ್ಪ ಅಸಂಸ್ಕೃತ ವ್ಯಕ್ತಿ:

ಇನ್ನು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ಏಕವಚನದಲ್ಲಿ ಟೀಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಈಶ್ವರಪ್ಪನಿಗೆ ಸಂಸ್ಕೃತಿನೇ ಇಲ್ಲಾ, ರಾಜಕೀಯದಲ್ಲಿ ಅತ್ಯಂತ ಅಸಂಸ್ಕೃತ ವ್ಯಕ್ತಿ. ಒಂದು ಪಾರ್ಲಿಮೆಂಟರಿ ಭಾಷೆ ಇದೆ. ರಾಜಕಾರಣಿ ಪಾರ್ಲಿಮೆಂಟರಿ ಭಾಷೆ ಪ್ರಕಾರ ಮಾತನಾಡಬೇಕು. ಅದು ಇಲ್ಲದೆ ಹೋದರೆ ಅವನು ಪ್ರಾಣಿಗಳಿಗೆ ಸಮಾನ ಎಂದು ಕಿಡಿಕಾರಿದರು.

ನಾನು ಸಿಎಂ ಆಗಿದ್ದಾಗ ಕುರುಬರು ನಮ್ಮನ್ನು ಎಸ್ಟಿಗೆ ಸೇರಿಸಿ ಎಂದು ಅರ್ಜಿ ಕೊಟ್ಟಿದ್ದರು. ನಾನು ಅದನ್ನು ಕುಲಶಾಸ್ತ್ರ ಅಧ್ಯಯನ ಮಾಡಿ ಕೊಡಿ ಎಂದು ಹೇಳಿದ್ದೆ. ಎಸ್ಟಿಗೆ ಸೇರಿಸಲು ಆಧಾರ ಬೇಕು, ಅದಕ್ಕೆ ಕುಲಶಾಸ್ತ್ರ ಅಧ್ಯಯನ ಮಾಡಲು ಮೈಸೂರಿನಲ್ಲಿರುವ ಇನ್ಸಿಸ್ಟಿಟ್ಯೂಟ್ ಗೆ ಕಳುಹಿಸಿಕೊಟ್ಟಿದ್ದೆ ಅವರು ಇನ್ನೂ ವರದಿ ಕೊಟ್ಟಿಲ್ಲ. ಈಶ್ವರಪ್ಪ ಕುರುಬರನ್ನು ಎಸ್ಟಿ ಮಾಡಿ ಎಂದು ಪಾದಯಾತ್ರೆ ಮಾಡಿದ್ದರು. ನಾನು ಅದಕ್ಕೆ ಈಶ್ವರಪ್ಪನಿಗೆ ಹೇಳಿದೆ ಎಂಟು ವರ್ಷದಿಂದ ದೆಹಲಿಯಲ್ಲಿ ನಿಮ್ಮ ಸರ್ಕಾರನೇ ಇದೆ ಕರ್ನಾಟಕದಲ್ಲೂ ನಿಮ್ಮದೇ ಸರ್ಕಾರ ಇದೇ ಕೂಡಲೇ ಮಾಡಿಸಿ ಎಂದು ಒತ್ತಾಯ ಮಾಡಿದ್ದೀನಿ ಎಂದರು.

ಜೋಶಿಗೆ ತಿರುಗೇಟು:

ಕಾಂಗ್ರೆಸ್ ವರಿಷ್ಠರಿಗೆ ಹತ್ತಿರವಾಗಲು ಸಿದ್ದರಾಮಯ್ಯ ಈ ರೀತಿ ಮಾಡುತ್ತಿದ್ದಾರೆ ಎಂದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾರು ಹೇಳಿದ್ದು, ನಾನು ಹತ್ತಿರ ಇಲ್ಲದೇನೆ ಸಿಎಂ ಆಗಿದ್ನಾ? ನಾನು ಕಾಂಗ್ರೆಸ್ ನಲ್ಲಿ ಹತ್ತಿರ ಇರುವುದರಿಂದಲೇ  ನನ್ನ ಸಿಎಂ ಮಾಡಿದ್ದು ಜೋಶಿಗೆ ಏನು ಗೊತ್ತಿಲ್ಲ ಪಾಪ, ಜನ ತೀರ್ಮಾನ ಮಾಡಿದ್ದು, ನಾನು ಅವರಿಗೆ ಹೇಳಿಕೊಟ್ಟಿದ್ದೀನಾ, ಜೋಶಿಗೆ ಹೇಳಿ ಲೀಡರ್ ಆಗುವುದು ಜನರಿಂದ ಜನರ ಮಧ್ಯದಿಂದ ಜೋಶಿ ಹೇಳುವುದರಿಂದ ಮಾಸ್ ಲೀಡರ್ ಆಗಲ್ಲ ಅಥವಾ ನಕಲಿನು ಆಗಲ್ಲ ಎಂದು ತಿರುಗೇಟು ನೀಡಿದರು.

Join Whatsapp
Exit mobile version