ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯ ಗುಲಾಂ ರಸೂಲ್ ದಂಪತಿಗೆ ಗುಂಡು

Prasthutha|

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಸರಪಂಚ ಆಗಿರುವ ಕುಲ್ ಗಾಂವ್ ಜಿಲ್ಲೆಯ ಬಿಜೆಪಿ ಕಿಸಾನ್ ಮೋರ್ಚಾ ಅಧ್ಯಕ್ಷ ಗುಲಾಂ ರಸೂಲ್ ದಾರ್ ಮತ್ತವರ ಮಡದಿ ಜವಾಹರ ಬಾನೂ ಅವರು ಗುಂಡೇಟಿಗೆ ಬಲಿಯಾಗಿದ್ದಾರೆ.

- Advertisement -

ಉಗ್ರರ ಗುಂಡೇಟಿಗೆ ಗಾಯಗೊಂಡ ಅವರನ್ನು ಕೂಡಲೆ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕುಲ್ ಗಾಂವ್ ಜಿಲ್ಲೆಯ ರೆದ್ವಾನಿ ವಾಸಿಯಾದ ದಾರ್ ಸರಪಂಚನಾಗಿದ್ದು, ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಆದರೆ ದಾರ್ ಈಗ ಅನಂತನಾಗ್ ನ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಟಿಆರ್ ಎಫ್- ದ ರೆಸಿಸ್ಟೆಂಟ್ ಫೋರ್ಸ್ ಗುಂಡಿನ ಹೊಣೆ ವಹಿಸಿಕೊಂಡಿದೆ. ಅವರೆಲ್ಲ ಜನದ್ರೋಹಿಗಳು. ನಮ್ಮ ಗೇಜಲ್ ತುಕಡಿ ದಾಳಿ ಮಾಡಿತ್ತು ಎಂದು ದ ರೆಸಿಸ್ಟೆಂಟ್ ಫೋರ್ಸ್ ಹೇಳಿಕೆ ನೀಡಿದೆ. ಬಿಜೆಪಿಯ ಜಮ್ಮು ಕಾಶ್ಮೀರದ ವಕ್ತಾರ ಅಲ್ತಾಫ್ ಠಾಕೂರ್ ಇದನ್ನು ಕ್ರೂರ ಕೃತ್ಯ ಎಂದು ಖಂಡಿಸಿದ್ದಾರೆ. ಇದು ಉಗ್ರರ ಖಿನ್ನತೆಯ ಫಲ, ಇದರಿಂದ ಯಾರಿಗೂ ಲಾಭವಿಲ್ಲ ಎಂದು ಸಹ ಅವರು ಹೇಳಿದರು.  



Join Whatsapp