Home ಟಾಪ್ ಸುದ್ದಿಗಳು ನನ್ನ ಹೆದರಿಸೊ ಮಗ ಹುಟ್ಟಿಲ್ಲ, ಬಿಜೆಪಿಯವರು ಏನು ಮಾಡುತ್ತಾರೋ ಮಾಡಿಕೊಳ್ಳಲಿ: ಸೋಮಶೇಖರ್

ನನ್ನ ಹೆದರಿಸೊ ಮಗ ಹುಟ್ಟಿಲ್ಲ, ಬಿಜೆಪಿಯವರು ಏನು ಮಾಡುತ್ತಾರೋ ಮಾಡಿಕೊಳ್ಳಲಿ: ಸೋಮಶೇಖರ್

ಬೆಂಗಳೂರು: ‘ನನ್ನ ಹೆದರಿಸೊ ಮಗ ಇನ್ನೂ ಹುಟ್ಟಿ ಬಂದಿಲ್ಲ. ಬಿಜೆಪಿಯವರು ಏನು ಮಾಡುತ್ತಾರೋ ಮಾಡಿಕೊಳ್ಳಲಿ. ನಾನು ಯಾವುದಕ್ಕೂ ಹೆದರುವುದಿಲ್ಲ’ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.


ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಬಿಜೆಪಿ ನಾಯಕರು ಏನೇನು ಮಾಡಿದ್ದಾರೆ ಎನ್ನುವ ಎಲ್ಲ ವಿಚಾರಗಳೂ ನನಗೆ ಗೊತ್ತು. ನನ್ನ ತಂಟೆಗೆ ಬಂದರೆ ಎಲ್ಲವನ್ನು ಬಿಚ್ಚಿಡಬೇಕಾಗುತ್ತದೆ’. ‘ರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿಯೇ ಮತ ಹಾಕಿದ್ದೇನೆ. ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ನವರು ಬಿಜೆಪಿಗೆ ಮತ ಹಾಕಿಲ್ಲವೇ? ಅಲ್ಲಿಗೊಂದು ನ್ಯಾಯ, ಇಲ್ಲಿಗೊಂದು ನ್ಯಾಯವೇ. ಬಿಜೆಪಿ ನನ್ನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅನರ್ಹತೆಯನ್ನಾದರೂ ಮಾಡಲಿ, ಉಚ್ಚಾಟನೆಯನ್ನಾದರೂ ಮಾಡಲಿ’ ಎಂದು ಸವಾಲು ಹಾಕಿದರು.

Join Whatsapp
Exit mobile version