Home ಟಾಪ್ ಸುದ್ದಿಗಳು ಕಾಂಗ್ರೆಸ್ ಶಾಸಕರ ಮನೆಯ ಸುತ್ತ ಚಿರತೆ ಕಾಟ, ವಿಧಾನ ಸಭೆಯಲ್ಲಿ ಪ್ರಸ್ತಾಪ

ಕಾಂಗ್ರೆಸ್ ಶಾಸಕರ ಮನೆಯ ಸುತ್ತ ಚಿರತೆ ಕಾಟ, ವಿಧಾನ ಸಭೆಯಲ್ಲಿ ಪ್ರಸ್ತಾಪ

ಬೆಂಗಳೂರು: ನನ್ನ ಮನೆಯ ಸುತ್ತ ಎಂಟು ದಿನಗಳಿಂದ ಚಿರತೆ ಓಡಾಡುತ್ತಿದೆ ಅದನ್ನು ಹಿಡಿದು ದೂರ ಬಿಡುವಂತೆ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಸದನದಲ್ಲಿ ಶೂನ್ಯ ವೇಳೆಯಲ್ಲಿ ಪರಿಪರಿಯಾಗಿ ಮನವಿ ಮಾಡಿದ ಪ್ರಸಂಗ ನಡೆದಿದೆ.
ಈಗಾಗಲೇ ಈ ಚಿರತೆ ಕುರಿ, ಆಡುಗಳನ್ನು ಹೊತ್ತೊಯ್ದಿದೆ. ಹುಬ್ಬಳ್ಳಿಯ ನೃಪತುಂಗ ಗುಡ್ಡದ ಬಳಿ ಚಿರತೆಗಳು ಓಡಾಡುತ್ತಿದ್ದು ಜನರನ್ನು ಭಯಕ್ಕೆ ಬೀಳಿಸಿವೆ. ನನ್ನ ಮನೆಯೂ ಅಲ್ಲಿಯೇ ಇರುವುದಾಗಿ ಶಾಸಕ ಅಬ್ಬಯ್ಯ ಪ್ರಸಾದ್ ವಿಧಾನ ಸಭೆಯಲ್ಲಿ ಮನವಿ ಮಾಡಿದರು.


ಮಾಜೀ ಸಚಿವ ಜಗದೀಶ್ ಶೆಟ್ಟರ್ ಅವರು ಹುಬ್ಬಳ್ಳಿ ಸುತ್ತ ಚಿರತೆ ಕಾಟ ಅತಿಯಾಗಿದೆ. ಬೇಗ ಪರಿಹಾರ ಅಗತ್ಯ ಎಂದರು.
ಸಚಿವ ಕಾರಜೋಳ ಅವರು ಚಿರತೆ ಹಿಡಿದು ದೂರ ಬಿಡಲು ಈಗಾಗಲೇ ಅರಣ್ಯ ಇಲಾಖೆಯವರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದು ಉತ್ತರಿಸಿದರು.

Join Whatsapp
Exit mobile version