Home ಟಾಪ್ ಸುದ್ದಿಗಳು ಖ್ಯಾತ ವ್ಯಂಗ್ಯಚಿತ್ರಕಾರ ನಾರಾಯಣ್ ದೇಬ್‌ನಾಥ್ ಇನ್ನಿಲ್ಲ

ಖ್ಯಾತ ವ್ಯಂಗ್ಯಚಿತ್ರಕಾರ ನಾರಾಯಣ್ ದೇಬ್‌ನಾಥ್ ಇನ್ನಿಲ್ಲ

ಕೋಲ್ಕತ್ತಾ: ಖ್ಯಾತ ವ್ಯಂಗ್ಯಚಿತ್ರಕಾರ ನಾರಾಯಣ್ ದೇಬ್‌ನಾಥ್ ನಿಧನರಾಗಿದ್ದಾರೆ.

ಅವರಿಗೆ 97 ವರ್ಷ ವಯಸ್ಸಾಗಿತ್ತು. ಮೂತ್ರಪಿಂಡ ಮತ್ತು ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಡಿಸೆಂಬರ್ 24 ರಂದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ನಾರಾಯಣ್ ದೇಬ್‌ನಾಥ್ ಅವರು ಹಂತಾ ಭೋಂತಾ, ನೋಂತೆ ಫೋಂತೆ ಮತ್ತು ಬಾತುಲ್ ದಿ ಗ್ರೇಟ್‌ನಂತಹ ಜನಪ್ರಿಯ ಕಾರ್ಟೂನ್ ಪಾತ್ರಗಳಿಗೆ ಜನ್ಮ ನೀಡಿದವರಾಗಿದ್ದಾರೆ. ಈ ಪಾತ್ರಗಳು ದಶಕಗಳಿಂದ ಮಕ್ಕಳು ಮತ್ತು ವಯಸ್ಕರನ್ನು ಸಮಾನವಾಗಿ ರಂಜಿಸಿದ್ದವು.

ಅವರು 2013 ರಲ್ಲಿ ಪದ್ಮಭೂಷಣ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2021 ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ನಾರಾಯಣ ದೇಬ್‌ನಾಥ್ ನಿಧನಕ್ಕೆ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.

Join Whatsapp
Exit mobile version