Home ಟಾಪ್ ಸುದ್ದಿಗಳು ವಿಶ್ವ ಅಥ್ಲೆಟಿಕ್ಸ್: ವರ್ಷದ ಮಹಿಳಾ ಪ್ರಶಸ್ತಿಗೆ ಭಾಜನರಾದ ಅಂಜು ಬಾಬಿ ಜಾರ್ಜ್

ವಿಶ್ವ ಅಥ್ಲೆಟಿಕ್ಸ್: ವರ್ಷದ ಮಹಿಳಾ ಪ್ರಶಸ್ತಿಗೆ ಭಾಜನರಾದ ಅಂಜು ಬಾಬಿ ಜಾರ್ಜ್

ನವದೆಹಲಿ: ವಿಶ್ವ ಅಥ್ಲೆಟಿಕ್ಸ್ ನ ವಾರ್ಷಿಕ ಮಹಿಳಾ ಪ್ರಶಸ್ತಿಗೆ ಭಾರತೀಯ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಭಾಜನರಾಗಿದ್ದಾರೆ. ದೇಶದಲ್ಲಿನ ಪ್ರತಿಭೆಯನ್ನು ಚಂದಗೊಳಿಸುವ ಮತ್ತು ಲಿಂಗ ಸಮಾನತೆಯನ್ನು ಪ್ರತಿಪಾದಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ಜಾರ್ಜ್ ಅವರಿಗೆ ನೀಡಲಾಗಿದೆ.

44 ವರ್ಷ ಪ್ರಾಯದ ಅಂಜು, 2003 ರ ಆವೃತ್ತಿಯ ಲಾಂಗ್ ಜಂಪ್ ಪಂದ್ಯಾವಳಿಯಲ್ಲಿ ಕಂಚಿನೊಂದಿಗೆ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾಪಟು. ಸದ್ಯ ಡಿಸೆಂಬರ್ ರಂದು ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯು ವಾರ್ಷಿಕ ಪ್ರಶಸ್ತಿಗೆ ಅಂಜು ಅವರ ಹೆಸರನ್ನು ಸೂಚಿಸಿದೆ.

ಅಂಜು ಅವರನ್ನು ಗೌರವಿಸಿದಕ್ಕಾಗಿ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI), ವಿಶ್ವ ಅಥ್ಲೆಟಿಕ್ಸ್ ಸಂಸ್ಥೆಯನ್ನು ಅಭಿನಂದಿಸಿದೆ.

Join Whatsapp
Exit mobile version