ಗುವಾಹಟಿ: ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಬೆಳೆಯಲು ಎಡಪಂಥೀಯರು, ಪ್ರಗತಿಪರರು ಕಾರಣ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವ ಶರ್ಮಾ ಹೇಳಿದ್ದಾರೆ. ಇದೇ ಸಮಯವನ್ನು ಕಾಂಗ್ರೆಸ್ ಬಳಸಿ ತನ್ನ ವೋಟ್ ಬ್ಯಾಂಕ್ ಆಗಿ ತಿರುಗಿಸಿಕೊಂಡಿತು ಎಂದಿದ್ದಾರೆ.
ವೀರ್ ಸಾವರ್ಕರ್ ಕುರಿತಾದ ಪುಸ್ತಕದ ಬಗ್ಗೆ ಗುವಾಹಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಸ್ವ ಸ್ವಾತಂತ್ರ್ಯ ಬಂದ ಬಳಿಕ ಎಡ- ಪ್ರಗತಿಪರರು ಬಂಡಾಯಗಾರರನ್ನು ಹುಟ್ಟುಹಾಕುವಂತಹ ಹಾಗೂ ಜನರು ಪರಸ್ಪರ ಹೊಡೆದಾಡಿಕೊಳ್ಳುವಂತಹ ರೀತಿಯ ಶೈಕ್ಷಣಿಕ ಪಠ್ಯಕ್ರಮಗಳನ್ನು ರೂಪಿಸಿದರು ಎಂದು ಆರೋಪಿಸಿದರು. ಇದರ ವಿರುದ್ಧ ನಾವು ಮಹಾನ್ ವ್ಯಕ್ತಿಗಳಾದ ಸ್ವಾಮಿ ವಿವೇಕಾನಂದ, ಶ್ರೀಮಂತ ಶಂಕರದೇವ್, ಲಚಿತ್ ಬೋರ್ಫುಕನ್ ಅವರನ್ನು ಶಾಲಾ ಪಠ್ಯಕ್ರಮಗಳಲ್ಲಿ ಸೂಕ್ತ ರೀತಿಯಲ್ಲಿ ಚಿತ್ರಿಸುವ ಅಗತ್ಯವಿದೆ ಎಂದು ಹೇಳಿದರು..