ಟೊರೆಂಟೊ: ಲೀನಾ ಮಣಿಮೇಕಲೈ ಅವರ ನಿರ್ದೇಶನದ ಸಾಕ್ಷ್ಯಚಿತ್ರದ ಪೋಸ್ಟರ್ ಸಾಕಷ್ಟು ವಿವಾದಕ್ಕೆ ನಾಂದಿಹಾಡಿದೆ.
ತನ್ನ ಸಾಕ್ಷ್ಯಚಿತ್ರಕ್ಕಾಗಿ ಲೀನಾ ಅವರು ಬಿಡುಗಡೆಗೊಳಿಸಿದ ಪೋಸ್ಟರ್’ನಲ್ಲಿ ಕಾಳಿ ದೇವತೆಯ ಕೈಯಲ್ಲಿ ಸಿಗರೇಟ್ ಸೇದುತ್ತಿರುವ ರೀತಿಯ ಚಿತ್ರ ವಿವಾದದ ಕಿಡಿ ಹೊತ್ತಿಸಿದೆ.
ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ದೂರಿ ನಟಿ, ನಿರ್ದೆಶಕಿ, ಕವಯಿತ್ರಿ ಲೀನಾ ಮಣಿಮೇಕಲೈ ವಿರುದ್ಧ ಟ್ವಿಟ್ಟರ್’ನಲ್ಲಿ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಮೂಲದ ಮಣಿಮೇಕಲೈ ಅವರು ಇತ್ತೀಚೆಗೆ ಕಾಳಿ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದು, ಇದರ ಪೋಸ್ಟರ್ ಅನ್ನು ಹಂಚಿಕೊಂಡಿದ್ದರು. ಇದರಲ್ಲಿ ಕಾಳಿ ದೇವತೆಯ ಒಂದು ಕೈಯಲ್ಲಿ ಸಿಗರೇಟ್ ಸೇದುವಂತೆ ಮತ್ತು ಮತ್ತೊಂದು ಕೈಯಲ್ಲಿ LGBTQ ಸಮುದಾಯದ ಧ್ವಜವನ್ನು ಹಿಡಿದಿರುವ ಶೈಲಿಯಲ್ಲಿ ಬಿಂಬಿಸಲಾಗಿದೆ.