Home ವಿದೇಶ ಲೆಬನಾನ್: ವಿಮಾನಗಳಲ್ಲಿ ಪೇಜರ್ ಬಳಕೆ ನಿಷೇಧ

ಲೆಬನಾನ್: ವಿಮಾನಗಳಲ್ಲಿ ಪೇಜರ್ ಬಳಕೆ ನಿಷೇಧ

ಬೈರೂತ್: ಲೆಬನಾನ್ ನಾಗರಿಕ ವಿಮಾನಯಾನ ಪ್ರಾಧಿಕಾರ ವಿಮಾನಗಳಲ್ಲಿ ಪೇಜರ್ ಹಾಗೂ ವಾಕಿಟಾಕಿಗಳ ಬಳಕೆಯನ್ನು ನಿಷೇಧಿಸಿ ಆದೇಶಿಸಿದೆ.


ಲೆಬನಾನ್‌ ಹಾಗೂ ಸಿರಿಯಾದಲ್ಲಿ ಪೇಜರ್‌ ಹಾಗೂ ವಾಕಿಟಾಕಿಗಳು ಸ್ಫೋಟಗೊಂಡು 12 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 3,000ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ಘಟನೆಯ ಬೆನ್ನಲ್ಲೇ ಲೆಬನಾನ್‌ ಪೇಜರ್‌ಗಳ ಬಳಕೆಯನ್ನು ನಿಷೇಧಿಸಿದೆ.

ಬೈರೂತ್‌ ನ ಹರಿರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ವಿಮಾನಗಳಲ್ಲಿ ಪೇಜರ್, ವಾಕಿಟಾಕಿಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಆದೇಶಿಸಿದೆ.

ಲೆಬನಾನ್‌ ನಲ್ಲಿ ಪೇಜರ್‌ ಗಳ ಸ್ಪೋಟದ ಬೆನ್ನಲ್ಲೇ ಹಿಜ್ಬುಲ್ಲಾ ಸಂಘಟನೆ ಇಸ್ರೇಲ್ ಮೇಲೆ ವ್ಯಗ್ರವಾಗಿದ್ದು, ಪ್ರತಿ ದಾಳಿ ಆರಂಭಿಸಲು ಗುರುವಾರ ಸಿದ್ದತೆ ನಡೆಸಿತ್ತು.

Join Whatsapp
Exit mobile version