ನವದೆಹಲಿ: ಚೋಟಿ ಹೋಳಿ ಅಥವಾ ಹೋಳಿ ಧವನ್ ಅಂಗವಾಗಿ ಮಾರ್ಚ್ 17 ಮತ್ತು 18ರಂದು ರಾಜ್ಯಸಭೆಯ ಕಲಾಪ ನಡೆಯುವುದಿಲ್ಲ ಎಂದು ಸಭಾಪತಿ ವೆಂಕಯ್ಯನಾಯ್ಡು ಸ್ಪಷ್ಟಪಡಿಸಿದ್ದಾರೆ.
ಈ ಮುಂಚೆ ಮಾರ್ಚ್ 17 ಮತ್ತು 18ರಂದು ಕಲಾಪ ನಡೆಯುವುದಾಗಿ ತಿಳಿಸಲಾಗಿತ್ತು ,ಹೋಳಿ ಹಬ್ಬ ಇರುವ ಹಿನ್ನೆಲೆಯಲ್ಲಿ ಈ ಎರಡು ದಿನ ಕಲಾಪಗಳು ನಡೆಯುವುದಿಲ್ಲ.ಜೊತೆಗೆ ಮಾರ್ಚ್ 19 ಮತ್ತು 20 ರಂದು ಸಾರ್ವಜನಿಕ ರಜೆ ಇರುವುದರಿಂದ ಒಟ್ಟು ನಾಲ್ಕು ದಿನಗಳ ಕಾಲ ಕಲಾಪ ನಡೆಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಮುಂಗಡ ಪತ್ರದ ಅಧಿವೇಶನದ ಮುಂದುವರೆದ ಭಾಗ ಇಂದಿನಿಂದ ಆರಂಭವಾಗಿದ್ದು 8ರವರೆಗೆ ನಡೆಯಲಿದೆ. ಇಂದು ಕಲಾಪ ಪೂರ್ಣಗೊಳ್ಳುವ ಮುನ್ನ ವೆಂಕಯ್ಯ ನಾಯ್ಡು ಅವರು ಈ ವಿಷಯ ತಿಳಿಸಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದ ಮುಂದುವರೆದ ಭಾಗ ಇಂದಿನಿಂದ ಆರಂಭವಾಗಿದ್ದು ಸದಸ್ಯರು ಕಲಾಪದಲ್ಲಿ ಅರ್ಥಪೂರ್ಣ ಚರ್ಚೆ ನಡೆಸುವಂತೆ ಅವರು ಮನವಿ ಮಾಡಿದರು.
ಇತ್ತೀಚೆಗೆ ದೇಶದಲ್ಲಿ ಅಗಲಿದ ವಿವಿಧ ಕ್ಷೇತ್ರಗಳ ಗಣ್ಯರಿಗೆ ರಾಜ್ಯಸಭೆಯಲ್ಲಿ ಇದೇ ಸಂದರ್ಭದಲ್ಲಿ ಭಾವಪೂರ್ಣ ಸಂತಾಪ ಸಲ್ಲಿಸಲಾಗಿದೆ.
ಮೃತರ ಗುಣಗಾನ ಮಾಡಿದ ಸಭಾಪತಿ ಎನ್ನುವಂತಹ ನಾಯ್ಡು ಅವರು ಮೃತರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಕೋರಿದ್ದಾರೆ