Home ಕರಾವಳಿ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಗ್ರೀನ್ ವೀವ್ ಪ್ರೌಢಶಾಲೆಯಲ್ಲಿ ‘ಅಟಲ್ ಟಿಂಕರಿಂಗ್ ಲ್ಯಾಬ್’ ಉದ್ಘಾಟನೆ

ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಗ್ರೀನ್ ವೀವ್ ಪ್ರೌಢಶಾಲೆಯಲ್ಲಿ ‘ಅಟಲ್ ಟಿಂಕರಿಂಗ್ ಲ್ಯಾಬ್’ ಉದ್ಘಾಟನೆ

ಮಂಗಳೂರು: ಮಂಗಳೂರು ಹೊರವಲಯ ಕೊಣಾಜೆ ಅಡ್ಕರೆಪಡ್ಪುವಿನಲ್ಲಿರುವ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಗ್ರೀನ್ ವೀವ್ ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಕೇಂದ್ರ ಸರಕಾರದ ಯೋಜನೆಯಾದ ‘ಅಟಲ್ ಟಿಂಕರಿಂಗ್ ಲ್ಯಾಬ್’ ಅನ್ನು ಬುಧವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳು ಪ್ರಾಯೋಗಿಕ ಅಧ್ಯಯನಕ್ಕೆ ಒತ್ತುಕೊಟ್ಟು ಓದಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.  ಐಎಎಸ್, ಐಪಿಎಸ್ ಪರೀಕ್ಷೆ ಬರೆಯುವವರು ಪ್ರಾಯೋಗಿಕ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡಬೆಕು, ಅಟಲ್ ಟಿಂಕರಿಂಗ್ ಲ್ಯಾಬ್ ನ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳುವ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಬೇಕಿದೆ ಎಂದರು

ಕೊಣಾಜೆ ಗ್ರಾಪಂ ಅಧ್ಯಕ್ಷೆ ಚಂಚಲಾಕ್ಷಿ ಮಾತನಾಡಿ, ಕೊಣಾಜೆ ವ್ಯಾಪ್ತಿಯಲ್ಲಿರುವ ಈ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣದ ಕೊಡುಗೆಯ ಮೂಲಕ ಮಾದರಿ ಸೇವೆ ನೀಡುತ್ತಿದೆ ಎಂದರು.

ಜಮಿಯ್ಯುತಲ್ ಫಲಾಹ್ ಸಂಸ್ಥೆಯ ಪರ್ವೇಝ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶಾಲೆಯು ಆರಂಭವಾಗಿ 30 ವರ್ಷಗಳು ಕಳೆದಿದ್ದು ಉಚಿತವಾಗಿ ಶಿಕ್ಷಣವನ್ನು ನೀಡುತ್ತಿದೆ. ಮೌಲ್ಯಯುತ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ನಮ್ಮ ಸಂಸ್ಥೆಯು ಮುನ್ನಡೆಯುತ್ತಿದೆ. ಜಿಲ್ಲೆಯ ಕೆಲವೇ ಕೆಲವು  ಶಾಲೆಗಳಿಗೆ ಸರಕಾರದ ಈ ಯೋಜನೆ ದೊರಕಿದೆ. ಇದರಿಂದ ಈ ಸಂಸ್ಥೆಗೆ, ನಮಗೆ ಪ್ರಶಸ್ತಿ ಗರಿ ಸಿಕ್ಕಿದಂತಾಗಿದೆ ಎಂದರು. ಕಾರ್ಯಕ್ರಮದಲ್ಲಿ ದ.ಕ.ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಅಧ್ಯಕ್ಷ ಹಾಜಿ ಶಬೀಹ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಫಝ್ಲುಲ್ ರಹೀಮ್, ಕೋಶಾಧಿಕಾರಿ ಎಫ್.ಎಂ.ಬಶೀರ್, ಮುಖ್ಯೋಪಾಧ್ಯಾಯಿನಿ ಎಲ್ವಿನ್ ಪಿ.ಐಮನ್, ಅಡ್ಕರೆಪಡ್ಪು ಮಸೀದಿಯ ಅಧ್ಯಕ್ಷ ಹಮೀದ್, ಟೆಸ್ಕಾಂ ಟೆಕ್ನಾಲಜಿಯ ಸದಕತ್ ಶಾ, ಮಹಮ್ಮದ್ ರಿಯಾಝ್, ಪಂಚಾಯತ್ ಸದಸ್ಯರಾದ ಹೈದರ್, ಫೌಝಿಯಾ, ಝೊಹರಾ, ಅಬ್ದುಲ್ ಖಾದರ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬೂಬಕರ್ ಮುಹಮ್ಮದ್, ಅಬೂಬಕರ್, ಸಂಸ್ಥೆಯ ಮಾಜಿ ಸಂಚಾಲಕ ಪಿ.ಬಿ.ಎಚ್. ರಝಾಕ್, ಇಮ್ತಿಯಾಝ್, ನಝೀರ್ ಅಹ್ಮದ್, ಎಂ.ಎಚ್.ಮಲಾರ್, ಶಾಲಾ ಸಮಿತಿಯ ಸಂಚಾಲಕ ಅಹ್ಮದ್ ಕುಂಞಿ ಮೊದಲಾದವರು ಉಪಸ್ಥಿತರಿದ್ದರು. ಪ್ರಾಂಶುಪಾಲ ಅಬೂಬಕರ್ ಸ್ಬಾಗತಿಸಿದರು. ರಶ್ಮಿ, ರೆನಿಟಾ ಕಾರ್ಯಕ್ರಮ ನಿರೂಪಿಸಿದರು. ನಮಿತಾ ಬಿ.ಎನ್. ವಂದಿಸಿದರು.  

Join Whatsapp
Exit mobile version