Home ಕರಾವಳಿ SDPI ಸಜಿಪನಡು ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಲತೀಫ್ ಸಜಿಪ,ಕಾರ್ಯದರ್ಶಿಯಾಗಿ ಶಾಫಿ ಕೋಟೆಕಣಿ ಆಯ್ಕೆ

SDPI ಸಜಿಪನಡು ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಲತೀಫ್ ಸಜಿಪ,ಕಾರ್ಯದರ್ಶಿಯಾಗಿ ಶಾಫಿ ಕೋಟೆಕಣಿ ಆಯ್ಕೆ

ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಸಜಿಪನಡು ಗ್ರಾಮ ಸಮಿತಿಯ ಆಂತರಿಕ ಚುನಾವಣೆ ದಿನಾಂಕ 30/07/2024 ರಂದು ಪಕ್ಷದ ಕಛೇರಿಯಲ್ಲಿ ಕೊಣಾಜೆ ಬ್ಲಾಕ್ ಅಧ್ಯಕ್ಷರಾದ ನವಾಝ್ ಸಜಿಪ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮ ಸಮಿತಿ ಜೊತೆ ಕಾರ್ಯದರ್ಶಿಯಾದ ಸಾದಿಕ್ ಗೋಳಿಪಡ್ಪು ಕಳೆದ ಸಾಲಿನ ವರದಿಯನ್ನು ಮಂಡಿಸಿದರು.

ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ ಉಬೈದ್ ಅಮ್ಮೆಂಬಳ‌ ಮತ್ತು ಆರೀಫ್ ಬೋಳಿಯಾರ್ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
2024-27 ರ ಅವಧಿಗೆ ಸಜಿಪನಡು ಗ್ರಾಮ ಸಮಿತಿಗೆ ನೂತನ ಅಧ್ಯಕ್ಷರಾಗಿ ಲತೀಫ್ ಸಜಿಪ, ಕಾರ್ಯದರ್ಶಿಯಾಗಿ ಶಾಫಿ ಕೋಟೆಕಣಿ, ಉಪಾಧ್ಯಕ್ಷರಾಗಿ ನವಾಝ್ ಸಜಿಪ, ಜೊತೆ ಕಾರ್ಯದರ್ಶಿಯಾಗಿ ನವಾಝ್ ಎನ್. ಕೋಶಾಧಿಕಾರಿಯಾಗಿ ಸಾದಿಕ್ ಗೋಳಿಪಡ್ಪು ಹಾಗು ಸಮಿತಿ ಸದಸ್ಯರಾಗಿ ಸಮದ್ ಸಜಿಪ ಮತ್ತು ಸಿರಾಜ್ ಕೋಟೆಕಣಿ ಆಯ್ಕೆಯಾದರು.

ನೂತನ ಅಧ್ಯಕ್ಷರಾದ ಲತೀಫ್ ಸಜಿಪ ಮತ್ತು ಉಪಾಧ್ಯಕ್ಷರಾದ ನವಾಝ್ ಸಜಿಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಜೊತೆ ಕಾರ್ಯದರ್ಶಿ ನವಾಝ್ ಎನ್ ಸ್ವಾಗತಿಸಿ, ವಂದಿಸಿದರು. ಸಾದಿಕ್ ಗೋಳಿಪಡ್ಪು ಕಾರ್ಯಕ್ರಮ ನಿರೂಪಿಸಿದರು.

Join Whatsapp
Exit mobile version