Home ಟಾಪ್ ಸುದ್ದಿಗಳು ಆಸ್ಕರ್ ಅವಾರ್ಡ್​ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ‘ಲಾಪತಾ ಲೇಡಿಸ್’ ಸಿನಿಮಾ

ಆಸ್ಕರ್ ಅವಾರ್ಡ್​ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆದ ‘ಲಾಪತಾ ಲೇಡಿಸ್’ ಸಿನಿಮಾ

ನವದೆಹಲಿ: ‘ಲಾಪತಾ ಲೇಡಿಸ್’ ಸಿನಿಮಾ ‘ಆಸ್ಕರ್ 2025’ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿದೆ.

ಕಿರಣ್ ರಾವ್ ನಿರ್ದೇಶನದ ಈ ಚಿತ್ರವನ್ನು ಆಮಿರ್ ಖಾನ್ ಅವರು ನಿರ್ಮಾಣ ಮಾಡಿದ್ದಾರೆ.

ಈ ವರ್ಷದ ಆರಂಭದಲ್ಲಿ ರಿಲೀಸ್ ಆದ ಈ ಚಿತ್ರ ಎಲ್ಲರಿಂದ ಮೆಚ್ಚುಗೆ ಪಡೆಯಿತು. ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ಮತ್ತೊಂದಷ್ಟು ಮಂದಿ ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ.

ಲಾಪತಾ ಲೇಡಿಸ್’ ಸಿನಿಮಾ ಮಹಿಳೆಯರ ಸಬಲೀಕರಣದ ಬಗ್ಗೆ ಇದೆ. ಈ ಸಿನಿಮಾದಲ್ಲಿ ನಿಶಾಂಶಿ ಗೋಯಲ್, ಪ್ರತಿಭಾ ರಾಂತಾ, ಸ್ಪರ್ಶ್ ಶ್ರೀವಾಸ್ತವ, ಚಾಯಾ ಕದಮ್, ರವಿ ಕಿಶನ್ ನಟಿಸಿದ್ದಾರೆ. ‘ಲಾಪತಾ ಲೇಡಿಸ್’ ಸಿನಿಮಾ ಆಸ್ಕರ್ ಗೆಲ್ಲಬೇಕು ಎಂಬುದು ಕಿರಣ್ ರಾವ್ ಅವರ ಕನಸಾಗಿದೆ.

Join Whatsapp
Exit mobile version