ಭೂಕುಸಿತ| ಹಳಿತಪ್ಪಿದ ಮಂಗಳೂರು-ಮುಂಬೈ ರೈಲು

Prasthutha|

ಹುಬ್ಬಳ್ಳಿ: ಕರಾವಳಿ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಮುಂಬೈಗೆ ತೆರಳುವ ವಿಶೇಷ ರೈಲು (ಮಂಗಳೂರು-ಮುಂಬೈ ಎಕ್ಸ್ ಪ್ರೆಸ್) ದುಧ್ಸಾಗರ್-ಸೋನೌಲಿಮ್ ರೈಲ್ವೇ ನಿಲ್ದಾಣಗಳ ನಡುವೆ ಹಳಿ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಲಿಲ್ಲ. ಎಲ್ಲಾ 345 ಪ್ರಯಾಣಿಕರನ್ನು ಮಡ್ಗಾಂವ್ ಗೆ ವಾಪಸ್ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

- Advertisement -

ಸೌತ್ ವೆಸ್ಟರ್ನ್ ರೈಲ್ವೆಯ ದುಧ್ಸಾಗರ್ ಮತ್ತು ಸೋನಾಲಿಮ್ ನಡುವೆ ಭೂಕುಸಿತ ಸಂಭವಿಸಿದೆ. ಘಟನೆ ನಡೆದ ಕೂಡಲೇ, ಕ್ಯಾಸಲ್ ರಾಕ್ ಮತ್ತು ವಾಸ್ಕೋ ಡಾ ಗಾಮಾದ ಅಪಘಾತ ಪರಿಹಾರ ರೈಲು(ಎಆರ್ಟಿ) ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿದ್ದು, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಲ್ಖೆಡೆ ಸೇರಿದಂತೆ ಹುಬ್ಬಳ್ಳಿ ವಿಭಾಗದ ಹಿರಿಯ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಈ ಮಧ್ಯೆ, ದುಧ್ಸಾಗರ್ ಮೂಲಕ ಮಡ್ಗಾಂವ್ ಗೆ ತೆರಳುತ್ತಿದ್ದ ಹಝರತ್ ನಿಜಾಮುದ್ದೀನ್-ವಾಸ್ಕೋ ಡಾ ಗಾಮಾ ವಿಶೇಷ ಎಕ್ಸ್ ಪ್ರೆಸ್ ರೈಲನ್ನು ನಿಲ್ಲಿಸಿ ಮತ್ತೆ ಲೋಂಡಾಗೆ ವಾಪಸ್ ಕಳುಹಿಸಲಾಯಿತು. ರೈಲಿನಲ್ಲಿ 887 ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದೆ.

Join Whatsapp