Home ಟಾಪ್ ಸುದ್ದಿಗಳು ಭೂ ವಿವಾದ: ಬುಡಕಟ್ಟು ಮಹಿಳೆಗೆ ಹಾಡಹಗಲೇ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಭೂ ವಿವಾದ: ಬುಡಕಟ್ಟು ಮಹಿಳೆಗೆ ಹಾಡಹಗಲೇ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಭೋಪಾಲ್: ತನ್ನ ಕುಟುಂಬದ ಭೂಮಿಯನ್ನು ಅತಿಕ್ರಮಿಸುವ ಪ್ರಯತ್ನವನ್ನು ವಿರೋಧಿಸಿದ ಬುಡಕಟ್ಟು ಮಹಿಳೆಗೆ ಬೆಂಕಿ ಹಚ್ಚಿದ ಭೀಭತ್ಸ ಘಟನೆ ಗುನಾ ಜಿಲ್ಲೆಯ ಧನೋರಿಯಾ ಗ್ರಾಮದಲ್ಲಿ ನಡೆದಿದೆ.

ಸಹರಿಯಾ ಬುಡಕಟ್ಟಿಗೆ ಸೇರಿದ 38 ವರ್ಷದ ಮಹಿಳೆ ರಾಮ್ ಪಿಯಾರಿ ಬಾಯಿಯನ್ನು ಇಬ್ಬರು ಮಹಿಳೆಯರು ಸೇರಿದಂತೆ ದುಷ್ಕರ್ಮಿಗಳ ಗುಂಪು ಬೆಂಕಿ ಹಚ್ಚಿದೆ. ಆಕೆ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ಸಂತ್ರಸ್ತೆ ರಾಮ್ ಪಿಯಾರಿ ಬಾಯಿ ಅವರು ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಅಡಿಯಲ್ಲಿ ಬರುವ ಬುಡಕಟ್ಟು ಜಾತಿಯ ಮಹಿಳೆ. ಆರೋಪಿಯ ಬೆದರಿಕೆಗಳಿಂದಾಗಿ ಆಕೆ ಪೊಲೀಸ್ ರಕ್ಷಣೆಯನ್ನು ಕೋರಿದ್ದರು. ಆದರೆ ಪೊಲೀಸರು ರಕ್ಷಣೆ ನೀಡಿಲ್ಲ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಜಮೀನಿನಲ್ಲಿ ಪಿಯಾರಿ ಬಾಯಿ ಹೊತ್ತಿ ಉರಿಯುವ ವೀಡಿಯೋ ವೈರಲ್ ಆಗಿದೆ

Join Whatsapp
Exit mobile version