Home ಟಾಪ್ ಸುದ್ದಿಗಳು ಉಚ್ಚಿಲ ಪೇಟೆಯಲ್ಲಿ ಉರಿಯದ ದಾರಿದೀಪಗಳು: ಮೊಬೈಲ್ ಟಾರ್ಚ್ ಹಿಡಿದು ಪ್ರತಿಭಟಿಸಿದ ಎಸ್‌ಡಿಪಿಐ

ಉಚ್ಚಿಲ ಪೇಟೆಯಲ್ಲಿ ಉರಿಯದ ದಾರಿದೀಪಗಳು: ಮೊಬೈಲ್ ಟಾರ್ಚ್ ಹಿಡಿದು ಪ್ರತಿಭಟಿಸಿದ ಎಸ್‌ಡಿಪಿಐ

ಉಚ್ಚಿಲ ಪೇಟೆಯಲ್ಲಿ ಹಾದು ಹೋಗುವ ರಾಷ್ಟ್ರಿಯ ಹೆದ್ದಾರಿ 66ರಲ್ಲಿ ಆಳವಡಿಸಿರುವ ದಾರಿದೀಪ ಕಳೆದ ಹಲವು ತಿಂಗಳುಗಳಿಂದ ಕೆಲಸ ಮಾಡದೇ ಇರುವುದನ್ನು ಖಂಡಿಸಿ ಸೊಶೀಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಚ್ಚಿಲ ಗ್ರಾಮ ಸಮಿತಿ ವತಿಯಿಂದ ಉಚ್ಚಿಲ ಪೇಟೆಯಲ್ಲಿ ಮೊಬೈಲ್ ಟಾರ್ಚ್ ಹಿಡಿದು ಎಸ್‌ಡಿಪಿಐ ಪ್ರತಿಭಟನೆ ನಡೆಸಿತು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ ಎಸ್.ಡಿ.ಪಿ.ಐ. ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಹನೀಫ್ ಮೂಳೂರು, ರಾಷ್ಟ್ರಿಯ ಹೆದ್ದಾರಿಯ 66ರಲ್ಲಿ ಸಾರ್ವಜನಿಕರ ಅನುಕೂಲಕರವಾಗುವಂತೆ ರಾಷ್ಟ್ರಿಯ ಹೆದ್ದಾರಿಯ ಡಿವೈಡರ್ಗಳಲ್ಲಿ ಅಳವಡಿಸಿರುವ ಬೀದಿದೀಪಗಳು ಕಳೆದ ಕೆಲ ತಿಂಗಳುಗಳಿಂದ ಉರಿಯದೆ ಇರುವುದರಿಂದ ಸಾರ್ವಜನಿಕರಿಗೆ ರಾತ್ರಿ ಹೊತ್ತು ರಸ್ತೆದಾಟಲು ಕಷ್ಟಕರವಾಗಿದೆ. ಈ ಬಗ್ಗೆ ಹಲವು ಬಾರಿ ನಾವು ಸಂಬಂಧಪಟ್ಟವರ ಗಮನಕ್ಕೆ ತಂದರು ಯಾವುದೇ ಪ್ರತಿಫಲವಾಗಲಿ ಅಥವಾ ಸಕಾರಾತ್ಮಕ ಪ್ರತಿಕ್ರಿಯೆ ನಮಗೆ ಸಿಕ್ಕಿರುವುದಿಲ್ಲ. ಮುಂದಿನ ಒಂದು ತಿಂಗಳ ಒಳಗಾಗಿ ಹೆದ್ದಾರಿ ಪ್ರಾಧಿಕಾರ ದಾರಿದೀಪ ಉರಿಯುವಂತೆ ಮಾಡದೆಯಿದ್ದಲ್ಲಿ ಉಚ್ಚಿಲದ ಸಾವರ್ಜನಿಕರ ಸಹಕಾರದೊಂದಿಗೆ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸಿದಾಗಿ ಎಚ್ಚರಿಸಿದರು.

ಎಸ್.ಡಿ.ಪಿ.ಐ‌‌‌. ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಮಜೀದ್, ದಾರಿದೀಪವನ್ನು ಉರಿಯದಿದ್ದಲ್ಲಿ ಆ ಕಂಬಗಳ ಅಗತ್ಯವಿರುವುದಿಲ್ಲ ಗುತ್ತಿಗೆ ಪಡೆದಿರುವ ನವಯುಗ ಕಂಪನಿ ತಕ್ಷಣವೇ ಸ್ಪಂದಿಸಿ ದಾರಿದೀಪಗಳನ್ನು ಉರಿಯುವಂತೆ ಮಾಡಬೇಕು ಇಲ್ಲವಾದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಆ ಕಂಬಗಳ ಕಿತ್ತು ಎಸೆಯುವ ಎಚ್ಚರಿಕೆಯನ್ನು ನೀಡಿದರು.

ಎಸ್.ಡಿ.ಪಿ.ಐ. ಉಚ್ಚಿಲ ಗ್ರಾಮ ಸಮಿತಿ ಅಧ್ಯಕ್ಷರಾದ ಹಮೀದ್ ಉಚ್ಚಿಲ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ರಜಾಕ್, ರಫೀಕ್ ದೀವು,ಆಸೀಫ್ ವೈ.ಸಿ, ತವಕ್ಕಲ್ ಯಂಗ್ ಮೆನ್ಸ್ ಅಸೋಶಿಯೆಶನ್ ನ ಅಧ್ಯಕ್ಷರಾದ ಅಬ್ದುಲ್ ರಜಾಕ್, ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಸಿರಾಜ್. ಎನ್.ಎಚ್., ನಿಸಾರ್ ಮುಲ್ಕಿ ಮತ್ತಿತರು ಉಪಸ್ಥಿತರಿದ್ದಾರು. ಪ್ರತಿಭಟನೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆ ಪಡೆದ ನವಯುಗ ಕಂಪೆನಿಯ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

Join Whatsapp
Exit mobile version