Home ಟಾಪ್ ಸುದ್ದಿಗಳು ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸದಿದ್ದರೂ ಕೋಟ್ಯಧಿಪತಿಗಳಾಗಿಲ್ಲವೇ ?: ಬಿಜೆಪಿ ಶಾಸಕ

ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸದಿದ್ದರೂ ಕೋಟ್ಯಧಿಪತಿಗಳಾಗಿಲ್ಲವೇ ?: ಬಿಜೆಪಿ ಶಾಸಕ

ಪಾಟ್ನಾ: ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ ಹಿಂದೂ ದೇವತೆಗಳ ಬಗ್ಗೆ ಹೇಳಿಕೆ ನೀಡಿದ್ದು, ಜನರು ಪ್ರತಿಭಟನೆ ನಡೆಸಿ ಬಿಜೆಪಿ ಶಾಸಕನ ಪ್ರತಿಕೃತಿ ದಹನ ಮಾಡಿದ್ದಾರೆ.


ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕ ಲಾಲನ್ ಪಾಸ್ವಾನ್ ಹಿಂದೂಗಳ ನಂಬಿಕೆಯಾದ ಲಕ್ಷ್ಮಿ ಪೂಜೆಯನ್ನು ಅವಹೇಳನ ಮಾಡುವ ಹೇಳಿಕೆ ನೀಡಿದ್ದಾರೆ. ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದಲೇ ಸಂಪತ್ತು ಸಿಗುವುದಾದರೆ ಮುಸ್ಲಿಮರು ಕೋಟ್ಯಧಿಪತಿಗಳಾಗುತ್ತಿರಲಿಲ್ಲ. ಮುಸಲ್ಮಾನರು ಲಕ್ಷ್ಮಿಯನ್ನು ಪೂಜಿಸುವುದಿಲ್ಲ. ಆದರೆ, ಅವರಲ್ಲಿ ಶ್ರೀಮಂತರಿಲ್ಲವೇ? ಮುಸ್ಲಿಮರು ಸರಸ್ವತಿ ದೇವಿಯನ್ನು ಪೂಜಿಸುವುದಿಲ್ಲ. ಆ ಸಮುದಾಯದಲ್ಲಿ ಪಂಡಿತರು ಇಲ್ಲವೇ. ಅವರು ಐಎಎಸ್, ಐಪಿಎಸ್ ಆಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ.


ಎಲ್ಲವೂ ಜನರ ನಂಬಿಕೆಯಾಗಿದೆ. ಆತ್ಮ ಮತ್ತು ಪರಮಾತ್ಮನ ಸಂಬಂಧವು ಕೇವಲ ಜನರ ನಂಬಿಕೆಯ ಮೇಲೆ ನಿಂತಿದೆ ಎಂದು ಬಿಜೆಪಿ ಶಾಸಕ ಹೇಳಿದ್ದಾರೆ.

Join Whatsapp
Exit mobile version