ನವದೆಹಲಿ, ಜು.31: ಜೆಡಿಯು ರಾಷ್ಟ್ರೀಯ ಅಧ್ಯಕ್ಷರಾಗಿ ರಾಜೀವ್ ಸಿಂಗ್ ಲಾಲನ್ ಸಿಂಗ್ ಅವರನ್ನು ನೇಮಕಗೊಳಿಸಲಾಗಿದೆ.
ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯು ಆರ್.ಸಿ.ಸಿಂಗ್ ಅವರ ಸ್ಥಾನಕ್ಕೆ ಲಾಲನ್ ಸಿಂಗ್ ಅವರನ್ನು ನೇಮಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜೆಡಿಯು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸಭೆ ಶನಿವಾರ ನವದೆಹಲಿಯ ಜಂತರ್ ಮಂತರ್ ಕಚೇರಿಯಲ್ಲಿ ನಡೆಯಿತು. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಪಕ್ಷದ ನಾಯಕರು ಪಾಲ್ಗೊಂಡಿದ್ದರು.
ಲಾಲನ್ ಸಿಂಗ್ ಹಲವಾರು ವರ್ಷಗಳಿಂದ ನಿತೀಶ್ ಕುಮಾರ್ ಅವರ ಆಪ್ತ ಸಹಾಯಕರಾಗಿ ಕೆಲಸ ಮಾಡಿದ್ದು, ಪಕ್ಷವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಲ್ ಜೆಪಿಯ ಏಕೈಕ ಬಿಹಾರ ಶಾಸಕ ರಾಜ್ ಕುಮಾರ್ ಸಿಂಗ್ ಅವರನ್ನು ಜೆಡಿಯುಗೆ ಕರೆತಂದ ಕೀರ್ತಿಗೆ ಪಾತ್ರರಾದ ಅವರು, ಚಿರಾಗ್ ಪಾಸ್ವಾನ್ ಗೆ ತಿರುಗೇಟು ನೀಡಿದ ಎಲ್ ಜೆಪಿಯಲ್ಲಿನ ವಿಭಜನೆಗೂ ಕಾರಣ ಎಂದು ಹೇಳಲಾಗಿದೆ.