ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಇಡೀ ದೇಶದಲ್ಲಿ ರಾಜಕೀಯ ಗದ್ದಲ ಶುರುವಾಗಿದೆ. ಹಾಗೆಯೇ ರಾಜೀನಾಮೆ ಪರ್ವವೂ ಮುಂದುವರೆದಿದೆ.
ಪಪ್ಪು ಯಾದವ್, ಡ್ಯಾನಿಶ್ ಅಲಿ, ಜೈ ಪ್ರಕಾಶ್ ಪಟೇಲ್ ಮತ್ತು ಚೌಧರಿ ಲಾಲ್ ಸಿಂಗ್ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ.
ಪಪ್ಪು ಯಾದವ್ ಅವರು ತಮ್ಮ ಜನ್ ಅಧಿಕಾರ್ ಪಕ್ಷವನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಿದರು. ಜಮ್ಮು ಮತ್ತು ಕಾಶ್ಮೀರದ ಮಾಜಿ ಬಿಜೆಪಿ ನಾಯಕ ಚೌಧರಿ ಲಾಲ್ ಸಿಂಗ್ ಕೂಡ ತಮ್ಮ ಪಕ್ಷ ‘ಡೋಗ್ರಾ ಸ್ವಾಭಿಮಾನ್ ಸಂಘಟನೆ’ ಅನ್ನು ಕಾಂಗ್ರೆಸ್ನೊಂದಿಗೆ ವಿಲೀನಗೊಳಿಸಿದರು.
ಅಲ್ಲದೆ, ಜಾರ್ಖಂಡ್ನ ಮಾಂಡು ಕ್ಷೇತ್ರದ ಬಿಜೆಪಿ ಶಾಸಕ ಜೈ ಪ್ರಕಾಶ್ ಪಟೇಲ್ ಕೂಡ ಕಾಂಗ್ರೆಸ್ ಸೇರಿದ್ದಾರೆ. ಅಮ್ರೋಹಾದಿಂದ ಅಮಾನತುಗೊಂಡ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸದ, ಡ್ಯಾನಿಶ್ ಅಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.