ಉತ್ತರ ಪ್ರದೇಶ : ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಮೊದಲ ಬಾರಿಗೆ ಸಮನ್ಸ್ ನೀಡಿದಾಗ ತಪ್ಪಿಸಿಕೊಂಡಿದ್ದ ಆತ ಇಂದು ಉತ್ತರಪ್ರದೇಶದ ಅಪರಾಧ ವಿಭಾಗದ ಶಾಖೆಗೆ ಹಾಜರಾಗಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಕೊಲೆ ಆರೋಪಿಯಾಗಿದ್ದಾರೆ. ಇಂದು ಪೊಲೀಸರೆದುರು ವಿಚಾರಣೆಗೆ ಹಾಜರಾಗಿದ್ದಾರೆ. ಮೊದಲ ಬಾರಿಗೆ ಸಮನ್ಸ್ ನೀಡಿದಾಗ ತಪ್ಪಿಸಿಕೊಂಡಿದ್ದ ಅವರಿಂದು ಉತ್ತರಪ್ರದೇಶದ ಅಪರಾಧ ವಿಭಾಗದ ಪೊಲೀಸರೆದುರು ಹಾಜರಾಗಿದ್ದಾರೆ. ಅವರ ತಂದೆ, ಕೇಂದ್ರ ಸಚಿವ ಅಜಯ್ ಮಿಶ್ರಾ , ಲಖಿಂಪುರ ಖೇರಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿಯೇ ಇದ್ದಾರೆ