Home ಟಾಪ್ ಸುದ್ದಿಗಳು ಓವರ್’ಟೇಕ್ ವೇಳೆ ಜಾರಿಬಿದ್ದ ಲಡಾಖ್ ರೈಡರ್: ಕೂದಲೆಳೆ ಅಂತರದಲ್ಲಿ ಉಳಿಯಿತು ಪ್ರಾಣ..!

ಓವರ್’ಟೇಕ್ ವೇಳೆ ಜಾರಿಬಿದ್ದ ಲಡಾಖ್ ರೈಡರ್: ಕೂದಲೆಳೆ ಅಂತರದಲ್ಲಿ ಉಳಿಯಿತು ಪ್ರಾಣ..!

ಶ್ರೀನಗರ: ಶ್ರೀನಗರದಿಂದ ಲಡಾಖ್’ಗೆ ಬುಲೆಟ್’ನಲ್ಲಿ ರೈಡ್ ಮಾಡುತ್ತಿದ್ದ ವೇಳೆ ಲಾರಿಯೊಂದನ್ನು ಹಿಂದಿಕ್ಕುವ ಯತ್ನದಲ್ಲಿ ನಿಯಂತ್ರಣ ಕಳೆದುಕೊಂಡ ಬುಲೆಟ್ ಸವಾರ ಬೈಕ್ ಸಮೇತ ನೆಲಕ್ಕೆ ಬಿದ್ದಿದ್ದಾನೆ. ಆದರೆ ರಸ್ತೆಯಂಚಿನಲ್ಲಿ ಬಿದ್ದ ಸವಾರ ಒಂದು ಅಡಿ ಸರಿದಿದ್ದರೂ ಭಾರಿ ಪ್ರಾಪತಕ್ಕೆ ಬೀಳುವ ಸಾಧ್ಯತೆಯಿತ್ತು. ಸದ್ಯ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ.

ಹಿಂಬದಿಯಲ್ಲಿದ್ದ ಬೈಕ್ ಸವಾರನ ಹೆಲ್ಮೆಟ್ ಕ್ಯಾಮರದಲ್ಲಿ ಈ ಮೈಜುಮ್ಮೆನ್ನುವ ದೃಶ್ಯ ಸೆರೆಯಾಗಿದ್ದು ಈ ವೀಡಿಯೋ ಇದೀಗ ವೈರಲ್ ಆಗಿದೆ.

ವಿಶ್ವದಲ್ಲಿಯೇ ಅತ್ಯಂತ ಅಪಾಯಕಾರಿ ಪರ್ವತ ಹಾದಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಝೋಜಿಲಾ ಪಾಸ್’ನಲ್ಲಿ ಘಟನೆ ನಡೆದಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಶ್ಮೀರ ಕಣಿವೆಯಿಂದ ಲಡಾಖ್ ಸಂಪರ್ಕಿಸುವ ಪ್ರಮುಖ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ಸಾಹಸಿ ಬೈಕ್ ರೈಡರ್’ಗಳಿಗೆ ಈ ರಸ್ತೆ ಇದೀಗ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

ಪ್ರಕೃತಿ ರಮಣೀಯ ಝೋಜಿಲಾ ಪಾಸ್’ನಲ್ಲಿ ರೈಡ್ ಮಾಡುತ್ತಿದ್ದ ವೇಳೆ ಕಬ್ಬಿಣದ ಸರಳುಗಳನ್ನು ತುಂಬಿದ್ದ ಲಾರಿಯೊಂದನ್ನು ಓವರ್’ಟೇಕ್ ಮಾಡಲು ಬುಲೆಟ್ ಸವಾರ ಯತ್ನಿಸಿದ್ದಾನೆ. ಆದರೆ ಈ ವೇಳೆ ಹಿಂದಿನ ಬೈಕ್’ನಲ್ಲಿದ್ದ ಸವಾರ, ‘ದೇಕ್ ಕೆ” ಅಂದರೆ ಎಚ್ಚರವಾಗಿರು … ಎಚ್ಚರವಾಗಿರು ಅಂತ ಪದೇ ಪದೇ ನೆನಪಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

Join Whatsapp
Exit mobile version