Home ಟಾಪ್ ಸುದ್ದಿಗಳು ಸದನದ ಸದಸ್ಯರ ಅಭಾವ; ವಿಧಾನಮಂಡಲ ಅಧಿವೇಶನ ಇಂದು ಮುಕ್ತಾಯ

ಸದನದ ಸದಸ್ಯರ ಅಭಾವ; ವಿಧಾನಮಂಡಲ ಅಧಿವೇಶನ ಇಂದು ಮುಕ್ತಾಯ

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲೇ ಮುಕ್ತಾಯಗೊಳ್ಳಲಿದೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದು, ಇಂದು ಸಾಯಂಕಾಲ ಅಧಿವೇಶನಕ್ಕೆ ತೆರೆಬೀಳಲಿದೆ.

ಕಲಾಪವು ಡಿಸೆಂಬರ್ 30ರವರೆಗೆ ನಡೆಯಬೇಕಿತ್ತು. ಆದರೆ, ಸದನದ ಅನೇಕ ಸದಸ್ಯರು ಅನ್ಯ ಕಾರ್ಯನಿಮಿತ್ತ ಭಾಗವಹಿಸಲು  ಸಾಧ್ಯವಾಗುವುದಿಲ್ಲ. ಹೀಗಾಗಿ, ಗುರುವಾರ ಸಂಜೆಯೇ ಕಲಾಪ ಮುಕ್ತಾಯಗೊಳಿಸುವ ಬಗ್ಗೆ ಹಿರಿಯ ಸದಸ್ಯರ ಜತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಸ್ಪೀಕರ್ ಕಾಗೇರಿ ತಿಳಿಸಿದರು.

Join Whatsapp
Exit mobile version