Home ಟಾಪ್ ಸುದ್ದಿಗಳು ಕಾಗದ ಖರೀದಿಸಲು ವಿದೇಶಿ ವಿನಿಮಯ ಕೊರತೆ: ಶಾಲಾ ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ

ಕಾಗದ ಖರೀದಿಸಲು ವಿದೇಶಿ ವಿನಿಮಯ ಕೊರತೆ: ಶಾಲಾ ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ

ಕೊಲಂಬೊ: ಶ್ರೀಲಂಕಾದಲ್ಲಿ ಕಾಗದದ ಕೊರತೆಯಿಂದ ಶಾಲಾ ಮಕ್ಕಳ ವಾರ್ಷಿಕ ಪರೀಕ್ಷೆಯನ್ನೇ ಮುಂದೂಡಲಾಗಿರುವ ಘಟನೆ ನಡೆದಿದೆ.

ಶ್ರೀಲಂಕಾದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಸೋಮವಾರದಿಂದ ವಾರ್ಷಿಕ ಪರೀಕ್ಷೆಗಳನ್ನು ಅಣಿಗೊಳಿಸಿತ್ತು. ಆದರೆ, ಕಾಗದದ ಕೊರತೆಯಿಂದ ಅನಿರ್ಧಾಷ್ಠಾವಧಿಯವರಿಗೆ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.

ಈ ವರ್ಷ 4.5 ಲಕ್ಷ ಮಕ್ಕಳು ಪರೀಕ್ಷೆ ಬರೆಯಬೇಕಿತ್ತು. ಆದರೆ, ವಿದೇಶದಿಂದ ಕಾಗದವನ್ನು ತರಿಸಿಕೊಳ್ಳಲು ಸರ್ಕಾರದ ಬಳಿ ವಿದೇಶಿ ವಿನಿಮಯ ಇರದಿದ್ದರಿಂದ ಕಾಗದದ ಕೊರತೆಯಾಗಿದೆ ಎಂದು ಸರ್ಕಾರ ಹೇಳಿದೆ.

ಆರ್ಥಿಕ ಮುಗ್ಗಟ್ಟಿನಿಂದ ಶ್ರೀಲಂಕಾಕ್ಕೆ ಆಹಾರ, ತೈಲ, ಔಷಧಿ ಕೊರತೆ ಎದುರಾಗಿದೆ. ಎದುರಾಗಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಶ್ರೀಲಂಕಾ ಅಧ್ಯಕ್ಷ ಗೋತಬಯಾ ರಾಜಪಕ್ಷೆ ಅವರು ಅಂತರಾಷ್ಟ್ರೀಯ ಹಣಕಾಸು ನಿಧಿ ಮುಖ್ಯಸ್ಥರ ಜೊತೆ ಬುಧವಾರವಷ್ಟೇ ಮಾತುಕತೆ ನಡೆಸಿದ್ದಾರೆ. ಶ್ರೀಲಂಕಾಕ್ಕೆ ವಾರ್ಷಿಕವಾಗಿ 6.9 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ಬೇಕಾಗುತ್ತದೆ. ಆದರೆ, ಈ ಫೆಬ್ರುವರಿ ಅಂತ್ಯದ ವೇಳೆ 2.3 ಬಿಲಿಯನ್ ಡಾಲರ್ ಮಾತ್ರ ಶ್ರೀಲಂಕಾ ಬಳಿ ವಿದೇಶಿ ವಿನಿಮಯ ಕಂಡು ಬಂದಿದೆ.  ಹೀಗಾಗಿ ಪರೀಕ್ಷೆಯನ್ನು ಮುಂದೂಡಲಾಗಿದೆ.

Join Whatsapp
Exit mobile version