ಬೆಂಗಳೂರು: ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಇಬ್ಬರ ನಡುವೆ ಸಮನ್ವಯ ಕೊರತೆ ಇದೆ ಎಂದು ಯಲಹಂಕ ಶಾಸಕ ಎಸ್ಆರ್ ವಿಶ್ವನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನ ನಡೆಯುತ್ತಿರುವ ಸಂದರ್ಭದಲ್ಲೇ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿದೆ. ಹಲ್ಲೆಗೊಳಗಾದ ಕಾರ್ಯಕರ್ತನ ರಕ್ಷಣೆ ಹೊಣೆ ನಮ್ಮದು ಎಂದರು. ಎಲ್ಲಾ ಶಾಸಕರ ಜೊತೆ ಸಮನ್ವಯ ಸಾಧಿಸಿಲ್ಲವೆಂದು ಸುವರ್ಣಸೌಧದಲ್ಲಿ ವಿಪಕ್ಷ ನಾಯಕ ಅಶೋಕ್ ವಿರುದ್ಧ ರೇಗಿದ್ದು ನಿಜ. ತೀವ್ರ ಬೇಸರವಾಗಿದ್ದರಿಂದ ನಿನ್ನೆಯೇ ನಾನು ಬೆಂಗಳೂರಿಗೆ ಬಂದುಬಿಟ್ಟೆ. ಸೋಮವಾರ ಸದನಕ್ಕೆ ಹಾಜರಾಗುತ್ತೇನೆ ಎಂದರು.