Home ಗಲ್ಫ್ ಭಾರತದೊಂದಿಗೆ ನೇರ ವಿಮಾನ ಹಾರಾಟಕ್ಕೆ ಕುವೈತ್ ಡಿಜಿಸಿಎ ಹಸಿರು ನಿಶಾನೆ

ಭಾರತದೊಂದಿಗೆ ನೇರ ವಿಮಾನ ಹಾರಾಟಕ್ಕೆ ಕುವೈತ್ ಡಿಜಿಸಿಎ ಹಸಿರು ನಿಶಾನೆ

ಕುವೈತ್: ಸೆಪ್ಟೆಂಬರ್ 6 ಮಂಗಳವಾರದಿಂದ ಕುವೈತ್ – ಭಾರತ ನೇರ ವಾಣಿಜ್ಯ ವಿಮಾನಯಾನವನ್ನು ಪುನರಾರಂಭಿಸಲಾಗಿದೆ ಎಂದು ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ದೃಢಪಡಿಸಿದೆ.

ಪ್ರಯಾಣಿಕರ ಸಂಖ್ಯೆಯನ್ನು ಅವಲಂಬಿಸಿ ಐದು ದೈನಂದಿನ ವಿಮಾನಗಳ ವೇಳಾಪಟ್ಟಿಯನ್ನು ಕ್ಯಾಬಿನೆಟ್ ರೆಸಲ್ಯೂಸನ್ ಅನುಗುಣವಾಗಿ ಸಿದ್ಧಪಡಿಸಲಾಗಿದೆಯೆಂದು ಡಿಜಿಸಿಎ ಮೇಲ್ವಿಚಾರಕ ರಹೀದ್ ಅಲ್-ತಹೇರ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಿಕೊಂಡು ವಿಮಾನಗಳಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ ಕುವೈಟ್ ಸುದ್ದಿ ಸಂಸ್ಥೆ ತಿಳಿಸಿದೆ.

ಈ ಹಿಂದೆ ಕೋವಿಡ್ ಹಿನ್ನೆಲೆಯಲ್ಲಿ ಭಾರತ, ಈಜಿಪ್ಟ್, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ ಮತ್ತು ಶ್ರೀಲಂಕಾ ದೇಶಗಳ ಪ್ರಯಾಣಿಕರಿಗೆ ಕುವೈತ್ ಪ್ರವೇಶಕ್ಕೆ ನಿಷೇಧ ಹೇರಿತು.

ಕುವೈತ್ ರಾಷ್ಟ್ರದಲ್ಲಿ ಅನುಮೋದನೆ ಪಡೆದ ಸಂಪೂರ್ಣ ಲಸಿಕೆ ಪಡೆದವರಿಗೆ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

Join Whatsapp
Exit mobile version