Home ಗಲ್ಫ್ RTI ಕಾಯ್ದೆ ಜಾರಿಗೊಳಿಸಿದ ಕುವೈತ್

RTI ಕಾಯ್ದೆ ಜಾರಿಗೊಳಿಸಿದ ಕುವೈತ್

ಸರಕಾರದ ಕಾರ್ಯಚಟುವಟಿಕೆಗಳನ್ನು ಹೆಚ್ಚು ಪಾರದರ್ಶಕವಾಗಿಸುವ ಉದ್ದೇಶದಿಂದ ಕುವೈತ್ RTI ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆಯನ್ನು ಜಾರಿಗೊಳಿಸುವುದರೊಂದಿಗೆ ಕುವೈತ್ ಜಿಸಿಸಿ ಯಲ್ಲಿ RTI ಕಾಯ್ದೆ ಜಾರಿಗೆ ತಂದ ಮೊದಲ ದೇಶವಾಗಲಿದೆ.

ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದ ಮಾಹಿತಿಗಾಗಿ ನಾಗರಿಕರು ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಅರವತ್ತು ದಿನಗಳಲ್ಲಿ ಉತ್ತರಿಸಬೇಕು ಎಂದು ಈ ಕಾನೂನು ಹೇಳುತ್ತದೆ. ಈ ಕಾಯ್ದೆಯು ಸರಕಾರಿ ಕಚೇರಿಗಳು ಅಥವಾ ಸರಕಾರದ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ಕೋರುವ ನಾಗರಿಕರಿಗೆ ಲಭ್ಯವಾಗಬೇಕು ಎಂದು ಕಾನೂನು ಷರತ್ತು ವಿಧಿಸಿದೆ. ಆಯಾ ಇಲಾಖೆಗಳಲ್ಲಿನ ವಿಶೇಷ ವೇದಿಕೆಯಲ್ಲಿ ಅರ್ಜಿ ಸಲ್ಲಿಸಿದರೆ ಅರವತ್ತು ದಿನಗಳಲ್ಲಿ ಮಾಹಿತಿ ನೀಡುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಅರ್ಜಿಯನ್ನು ತಿರಸ್ಕರಿಸುವುದಾದರೆ ನಿಖರವಾದ ಕಾರಣವನ್ನು ತೋರಿಸಬೇಕು. ಅದೂ ಲಿಖಿತವಾಗಿರಬೇಕು ಎಂದು ಸರಕಾರಿ ಸಂವಹನ ಕೇಂದ್ರ ಟ್ವಿಟ್ಟರ್ ನಲ್ಲಿ ತಿಳಿಸಿದೆ.

Join Whatsapp
Exit mobile version