ಕುವೈತ್ ಸಿಟಿ: ಈದ್-ಉಲ್-ಫಿತರ್ ಹಬ್ಬದ ನಿಮಿತ್ತ ಸರ್ಕಾರಿ ಸಂಸ್ಥೆಗಳಿಗೆ ಕುವೈತ್ ಸರಕಾರ 5 ದಿನಗಳ ರಜೆ ಘೋಷಿಸಿದೆ.
21ರಿಂದ 25ರವರೆಗೆ ರಜೆ ಇರಲಿದೆ. 26ರಂದು ಕಚೇರಿಗಳು ತೆರೆಯಲಿವೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ಆದಾಗ್ಯೂ, ತುರ್ತು ಸೇವಾ ಇಲಾಖೆಯಲ್ಲಿರುವ ಸಿಬ್ಬಂದಿಗಳಲ್ಲಿ ರಜಾದಿನಗಳಲ್ಲಿ ಬದಲಾವಣೆ ಇರುತ್ತದೆ.