Home Uncategorized ಕುಶಾಲನಗರ: ಪೊಲೀಸ್ ಅಧಿಕಾರಿ ನಾಪತ್ತೆ ಕುಟುಂಬಸ್ಥರಲ್ಲಿ ಆತಂಕ

ಕುಶಾಲನಗರ: ಪೊಲೀಸ್ ಅಧಿಕಾರಿ ನಾಪತ್ತೆ ಕುಟುಂಬಸ್ಥರಲ್ಲಿ ಆತಂಕ

ಮಡಿಕೇರಿ: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಪೊಲೀಸ್ ಎಎಸ್‌ಐಯೋರ್ವರು ನಾಪತ್ತೆಯಾಗಿದ್ದು, ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕುಶಾಲನಗರ ಸಂಚಾರಿ ಪೊಲೀಸ್ ಎಎಸ್‌ಐ ಸುರೇಶ್ ನಾಪತ್ತೆಯಾದ ಪೊಲೀಸ್ ಅಧಿಕಾರಿಯಾಗಿದ್ದು, ಮೊಬೈಲ್ ಕೂಡ ಸ್ವಿಚ್ ಆಫ್ ಆಗಿರುವುದರಿಂದ ಕುಟುಂಭಸ್ಥರಲ್ಲಿ ಆತಂಕ ಸೃಷ್ಟಿಸಿದೆ. ಅಷ್ಟೇ ಅಲ್ಲದೇ ಕುಶಾಲನಗರದಲ್ಲಿ ಇರುವ ಪೊಲೀಸ್ ಕ್ವಾಟರ್ಸ್ಗೆ ಬೀಗ ಹಾಕಿ ಸುರೇಶ್ ತೆರಳಿದ್ದಾರೆ.

ಈ ನಿಟ್ಟಿನಲ್ಲಿ ಕುಶಾಲನಗರ ಪೊಲೀಸರು ಹಾಗೂ ಸಹೋದ್ಯೋಗಿಗಳು ಸುರೇಶ್ ಅವರ ಫೋನ್‌ನ ಟವರ್ ಲೊಕೇಶನ್ ಅನ್ನು ಪರಿಶೀಲಿಸಿದಾಗ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯಲ್ಲಿ ಎಂಬಲ್ಲಿ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ಸುರೇಶ್ ಅವರಿಗೆ ಹುಡುಕಾಟದಲ್ಲಿ ನಡೆಸಿದ್ದಾರೆ

ಸುರೇಶ್ ಅವರು ಕಾಣೆಯಾಗಿರುವ ಬೆನ್ನಲ್ಲೇ ಸುರೇಶ್ ಪತ್ನಿಗೆ ವಿಷಯ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ಶೋಭಾ ಕುಶಾಲನಗರದ ಪೊಲೀಸ್ ಠಾಣೆಗೆ ದೂರು ನೀಡಿ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಶೋಭಾ ಅವರು ಸದ್ಯ ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಮೂಲತಃ ಸುರೇಶ್ ಅವರು ಹಾಸನ ಜಿಲ್ಲೆಯ ಕೊಣನೂರಿನವರಾಗಿದ್ದಾರೆ. ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೆ ಸಾಕಷ್ಟು ರಜೆ ಹಾಕುತ್ತಿದ್ದರು ಎಂದು ಹೇಳಲಾಗುತ್ತಿದೆ. ಸದ್ಯ ಪ್ರಕರಣವನ್ನು ಕುಶಾಲನಗರ ಪೊಲೀಸರು ದಾಖಲು ಮಾಡಿಕೊಂಡು ನಾಪತ್ತೆಯಾಗಿರುವ ಸುರೇಶ್ ಅವರ ಹುಡುಕಾಟ ನಡೆಸುತ್ತಿದ್ದಾರೆ.

Join Whatsapp
Exit mobile version