Home ಟಾಪ್ ಸುದ್ದಿಗಳು ಆತ್ಮಗೌರವ ಇಲ್ಲದ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಬೆಳೆಸಿದ್ದಾರೆ: ಸಿಎಂ ಸಿದ್ದರಾಮಯ್ಯ

ಆತ್ಮಗೌರವ ಇಲ್ಲದ ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಬೆಳೆಸಿದ್ದಾರೆ: ಸಿಎಂ ಸಿದ್ದರಾಮಯ್ಯ

ಮೈಸೂರು: ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ದೇವೇಗೌಡ ಅವರಿಗೆ ಕೊಂಚವಾದರೂ ಆತ್ಮಗೌರವ ಇದ್ದಿದ್ದರೆ ಬಿಜೆಪಿ ಮೈತ್ರಿ ಬೆಳೆಸುತ್ತಿರಲಿಲ್ಲ. ಆದರೆ ಹಿಂದಿನದೆಲ್ಲವನ್ನು ಮರೆತು ತಾವು ಮತ್ತು ಬಿಜೆಪಿ ನಾಯಕರು ಭಾಯಿ ಭಾಯಿ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಗರದ ಅಭಿಷೇಕ್ ವೃತ್ತದಲ್ಲಿ ಬೃಹತ್ ಕಾಂಗ್ರೆಸ್ ಸಮಾವೇಶದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಮತ್ತು ಬಿಜೆಪಿ ನಡುವಿನ ಮೈತ್ರಿಯನ್ನು ಗೇಲಿ ಮಾಡಿದರು. ಮೊನ್ನೆಯವರೆಗೆ ಬಿಜೆಪಿ ನಾಯಕರನ್ನು ಬೈದಾಡಿಕೊಂಡು ತಿರುಗುತ್ತಿದ್ದ ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕರು ಈಗ ಅವರ ಜೊತೆ ಶಾಮೀಲಾಗಿದ್ದಾರೆ. 2018 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 80 ಸೀಟು ಸಿಕ್ಕಿದ್ದರೂ ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಬಾರದು ಅನ್ನೋ ಒಂದೇ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಮಾಡಿ ಅವರನ್ನು ಮುಖ್ಯಮಂತ್ರಿ ಮಾಡಿದೆವು. ಅದಕ್ಕೆ ದೇವೇಗೌಡರ ಒಪ್ಪಿಗೆ ಸಹ ಇತ್ತು. 14 ತಿಂಗಳು ಕಾಲ ಚೆನ್ನಾಗಿ ನಡೆದಿದ್ದ ಸರ್ಕಾರವನ್ನು ಬೀಳಿಸಿದ್ದು ಯಡಿಯೂರಪ್ಪ ಎಂದು ಸಿದ್ದರಾಮಯ್ಯ ಗಟ್ಟಿಧ್ವನಿಯಲ್ಲಿ ಹೇಳಿದರು.

Join Whatsapp
Exit mobile version