Home ಟಾಪ್ ಸುದ್ದಿಗಳು ಚಾಮರಾಜನಗರ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ : ಕುಮಾರಸ್ವಾಮಿ ಕಟು ಟೀಕೆ

ಚಾಮರಾಜನಗರ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ : ಕುಮಾರಸ್ವಾಮಿ ಕಟು ಟೀಕೆ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬುಧವಾರ ವ್ಯಂಗ್ಯ ವಾಡಿದ್ದಾರೆ.

ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಾಜಿ ಸಿ ಎಂ‌ ಕುಮಾರಸ್ವಾಮಿ,

ಬೆಂಗಳೂರಿನಲ್ಲಿ ನಿನ್ನೆ ದೊಡ್ಡ ಡ್ರಾಮ ನಡೆಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಇಬ್ಬರು ಶಾಸಕರು ವಾರ್ ರೂಂಗೆ ನುಗ್ಗಿ ‌ ಡ್ರಾಮ ಮಾಡಿ ಅಗ್ಗದ ಪ್ರಚಾರ ಮುಂದಾಗಿದ್ದಾರೆ. ಕೆಲವು ಮಾಧ್ಯಮ ಗಳು ಆತನನ್ನು ಬಾಹುಬಲಿ ಎಂದು ವೈಭವೀಕರಿಸಿದ್ದಾರೆ.‌ ನನ್ನ ಸರ್ಕಾರ ಕಿತ್ತು ಹಾಕುವಲ್ಲಿ ಯಶಸ್ವಿಯಾದ ಕೆಲ ಮಾಧ್ಯಮ ಸಂಪಾದಕರು, ಈಗ ನಿನ್ನೆಯಿಂದ ಕೊಲೆಗಡುಕ ಸರ್ಕಾರ ಎಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.

ಬೆಂಗಳೂರಿನಲ್ಲಿರುವ ವಾರ್ ರೂಂನಲ್ಲಿ ಮದರಸ ಮಾಡಲು ಹೊರಟಿದ್ದೀರಾ ಅಂತ ಆ‌ ಸಂಸದ ಪ್ರಶ್ನೆ ಮಾಡಿದ್ದಾನೆ.

ಇಲ್ಲಿ ಜನಗಳು ಸಾಯುತ್ತಿದ್ದಾರೆ.‌ ಅಲ್ಲಿ ಹೋಗಿ ಇವರುಗಳು ರಾಜಕೀಯ ಮಾಡುತ್ತಿದ್ದಾರೆ. ಜಾತಿ ಇಲ್ಲಿ ಕೆಲಸ ಮಾಡಲ್ಲ, ಪ್ರಾಮಾಣಕತೆ ಮುಖ್ಯ ಎಂದರು.

ಆಕ್ಸಿಜನ್ ಕೊರತೆ ಬಗ್ಗೆ ಜನಕ್ಕೆ ಸತ್ಯ ಹೇಳಬೇಕು. ಕರೊನಾ ನಿರ್ವಹಣೆಗೆ 5 ಜನ ಮಂತ್ರಿಗಳಿಗೆ ಜವಾಬ್ದಾರಿ ಕೊಟ್ಟ ಮೇಲೆ ಆರೋಗ್ಯ ಮಂತ್ರಿ ಸುಧಾಕರ್ ಕ್ಯಾಬಿನೆಟ್ ಸಭೆ ಬಿಟ್ಟು ಎದ್ದು ಹೋದರು ಎಂಬ ಮಾಹಿತಿ ಇದೆ.

ಇದು ಸರ್ಕಾರದ ಒಗ್ಗಟ್ಟನ್ನು ಪ್ರಶ್ನೆ ಮಾಡುತ್ತದೆ ಎಂದು ಹೇಳಿದರು.

ಬೆಡ್ ಬ್ಲಾಕಿಂಗ್ ದಂಧೆ ವಿಚಾರವಾಗಿ ಕೆಲವರನ್ನ ಬಂಧಿಸಲಾಗಿದೆ. ಬಂಧಿತರು ಎನ್‌ಜಿ‌ಓ ನಡೆಸುತ್ತಿದ್ದರು ಎಂಬ ಮಾಹಿತಿ ಇದೆ. ಇವರಿಗೆ ಬೆಡ್ ಅಲರ್ಟ್ ಮಾಡಲು ಜವಾಬ್ದಾರಿ ಕೊಟ್ಟವರು ಯಾರು.? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.‌

ಕೊವಿಡ್ ವಾರಿಯರ್ಸ್ ಪೈಕಿ 5-6% ಜನ ದುಡ್ಡು ಮಾಡಲು ಇರಬಹುದು. ಯಾಕೆಂದ್ರೆ ನೀವು ಪೋಸ್ಟಿಂಗ್ ಹಾಕಬೇಕಾದರೆ ಹಣ ಪಡೆದು ಹಾಕಿದ್ದೀರಿ. ಈಗ ಆತ ದುಡ್ಡು ಮಾಡಲು ಹೊರಟಿದ್ದಾನೆ. ನಿಮ್ಮಲ್ಲಿ ಲೂಪ್ ಹೋಲ್ಸ್ ಇಟ್ಟು ಕೊಂಡು ಜನರ ಹಾದಿ ತಪ್ಪಿಸಬೇಡಿ. ಜನರು ಬೀದಿಯಲ್ಲಿ ಸಾಯುತ್ತಿದ್ದರೆ ನೀವು ಹುಡುಗಾಟ ಆಡುತ್ತಿದ್ದೀರಾ.? ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

Join Whatsapp
Exit mobile version