ಕುಮಾರಸ್ವಾಮಿ ಮೊದಲು ಪೆನ್ ಡ್ರೈವ್ ರಿಲೀಸ್ ಮಾಡ್ಲಿ: ಝಮೀರ್ ಅಹ್ಮದ್

Prasthutha|

ಆನೇಕಲ್: ಕುಮಾರಸ್ವಾಮಿ ನನ್ನ ಬಳಿ ಪೆನ್ ಡ್ರೈವ್ ಇದೆ ಎಂದು ಒಂದು ವಾರದ ಹಿಂದೆ ಹೇಳಿದ್ದರು. ಪೆನ್ ಡ್ರೈವ್ ಇದ್ದಿದ್ದರೆ ಇಷ್ಟು ದಿನ ಇಟ್ಟುಕೊಳ್ಳುತ್ತಿದ್ದರಾ? ಎಂದು ವಸತಿ ಸಚಿವ ಜಮೀರ್ ಅಹ್ಮದ್ ಪ್ರಶ್ನಿಸಿದ್ದಾರೆ.

- Advertisement -

ಆನೇಕಲ್ ನ ಇಂಡ್ಲವಾಡಿಯಲ್ಲಿ ಮಾತನಾಡಿದ ಅವರು, ಹೀಗೆ ಏನೋ ಜೇಬಿನಿಂದ ತೆಗೆದು ತೋರಿಸಿದರು, ಇದ್ದಿದ್ದರೆ ಬಿಡೋರಾ ಅವರು. ಸ್ಪೀಕರ್ ಸಚಿವರನ್ನು ವಜಾ ಮಾಡಿದ್ರೆ, ಆಡಿಯೋ, ವಿಡಿಯೋ ರಿಲೀಸ್ ಮಾಡಲು ರೆಡಿ ಇದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎಂದು ಮಾಧ್ಯದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿದ ಸಚಿವರು, ಮೊದಲು ಅವರು ರಿಲೀಸ್ ಮಾಡ್ಲಿ ಆಮೇಲೆ ನೋಡೋಣ ಎಂದರು.