Home ಟಾಪ್ ಸುದ್ದಿಗಳು ಇಟಲಿಯಮ್ಮನನ್ನು ನಮ್ಮ ಇಂಡಿಯಾಕ್ಕೆ ಕರೆದುಕೊಂಡು ಬಂದಿದ್ದೀರಿ: ಡಿಸಿಎಂಗೆ ಕುಮಾರಸ್ವಾಮಿ ತಿರುಗೇಟು

ಇಟಲಿಯಮ್ಮನನ್ನು ನಮ್ಮ ಇಂಡಿಯಾಕ್ಕೆ ಕರೆದುಕೊಂಡು ಬಂದಿದ್ದೀರಿ: ಡಿಸಿಎಂಗೆ ಕುಮಾರಸ್ವಾಮಿ ತಿರುಗೇಟು

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗುತ್ತಿದೆ. ಉತ್ತರ ಪ್ರದೇಶದಿಂದ‌ ಕೇರಳಕ್ಕೆ ರಾಹುಲ್ ಗಾಂಧಿಯವರನ್ನು ಕರೆತಂದಿದ್ದಾರೆ. ಇಟಲಿಯಮ್ಮನನ್ನು ನಮ್ಮ ಇಂಡಿಯಾಕ್ಕೆ ಕರೆದುಕೊಂಡು ಬಂದಿದ್ದೀರಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆರೋಪಕ್ಕೆ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಮಂಡ್ಯ ಪಾಕಿಸ್ತಾನದಲ್ಲಿ ಇಲ್ಲ, ಬದಲಾಗಿ ಮಂಡ್ಯ ಇರೋದು ನಮ್ಮ ಕರ್ನಾಟಕದಲ್ಲಿ. ನಾನು ಕರ್ನಾಟಕದಲ್ಲಿ ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧೆ ಮಾಡಬಹುದು ಎಂದು ಹೇಳಿದ್ದಾರೆ.

ರವಿವಾರ ಸುಮಲತಾ ನಿವಾಸಕ್ಕೆ ಮಾಜಿ ಸಿಎಂ ಕುಮಾರ ಸ್ವಾಮಿ ಹೋಗಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದರು.

Join Whatsapp
Exit mobile version