ಯಡಿಯೂರಪ್ಪ ಜೈಲಿಗೆ ಹೋಗಲು ಕುಮಾರಸ್ವಾಮಿ ಕಾರಣ: ಶಾಸಕ ಸವದಿ

Prasthutha|

ಚಿಕ್ಕೋಡಿ: ಮಾಜಿ ಸಿಎಂ ಕುಮಾರಸ್ವಾಮಿ ವಚನ ಭ್ರಷ್ಟರು ಎಂದು ಆರೋಪ ಮಾಡಿ ದ್ವೇಷ ಸಾಧಿಸಲು ಯಡಿಯೂರಪ್ಪ ಹೋಗಿದ್ದವರು. ಅದೇ ಕುಮಾರಸ್ವಾಮಿ ಅವರು ಬಿಎಸ್ವೈ ಅವರನ್ನು ಭ್ರಷ್ಟಾಚಾರ ಸುಳಿಯಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದರು ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಅಧಿಕಾರಿಗೋಸ್ಕರ ಇಬ್ಬರು ನಾಯಕರು ಸ್ವಾಭಿಮಾನ ಬದಿಗೆ ಒತ್ತಿ ಬಿಜೆಪಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಕಿಡಿಕಾರಿದ್ದಾರೆ.


ಒಬ್ಬರು ನಾಲ್ಕು ಸಾರಿ ಮುಖ್ಯಮಂತ್ರಿ ಆದವರು ಮತ್ತು ಇನ್ನೊಬ್ಬರು ಎರಡು ಸಲ ಮುಖ್ಯಮಂತ್ರಿ ಆದವರು, ಹಿಂದೆ ಇಬ್ಬರು ಸೇರಿಕೊಂಡು 20/20 ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು. ಅಧಿಕಾರ ಹಂಚಿಕೆಯಲ್ಲಿ ಕುಮಾಸ್ವಾಮಿ ಅವರು ಬಿಜೆಪಿಗೆ ಕೈಕೊಟ್ಟರು. ಅಂದು ಕುಮಾರಸ್ವಾಮಿ ಅವರು ವಚನ ಭ್ರಷ್ಟರು ಎಂಬುದನ್ನೂ ಯಡಿಯೂರಪ್ಪ ಆರೋಪಿಸಿ ದ್ವೇಷ ಸಾಧಿಸಿದ್ದರು ಎಂದರು.