ಜೆಡಿಎಸ್ ನಲ್ಲಿ ಕುಮಾರಸ್ವಾಮಿಯೇ ಅಧ್ಯಕ್ಷರು, ಅದರಲ್ಲೇನೂ ವಿಶೇಷವಿಲ್ಲ: ಚಲುವರಾಯಸ್ವಾಮಿ

Prasthutha|

ಬೆಂಗಳೂರು: ಜೆಡಿಎಸ್ ಪಕ್ಷದಲ್ಲಿ ಬೇರೆಯವರು ಅಧ್ಯಕ್ಷರಾಗಿದ್ದರೂ ಕುಮಾರಸ್ವಾಮಿಯೇ ಅಧ್ಯಕ್ಷರಾಗಿರುತ್ತಾರೆ. ಅದರಲ್ಲೇನೂ ವಿಶೇಷವಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

- Advertisement -


ವಿಧಾನಸೌಧದಲ್ಲಿ ಗುರುವಾರ ಸಿ.ಎಂ.ಇಬ್ರಾಹಿಂ ಉಚ್ಛಾಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದೆಲ್ಲ ನಾವು ನೋಡದಿರುವ ವಿಚಾರವಲ್ಲ. ಏನೂ ವಿಶೇಷವೂ ಇಲ್ಲ. ಅನುಭವ ಇದ್ದುಕೊಂಡು ಇಬ್ರಾಹಿಂ ಅಲ್ಲಿಗೆ ಹೋಗಿದ್ದರು. ಅವರು ಇಲ್ಲೇ ಇದ್ದಿದ್ರೆ ಗೌರವ ಇರುತ್ತಿತ್ತು ಎಂದರು.