Home ಟಾಪ್ ಸುದ್ದಿಗಳು ಸದನದಲ್ಲಿ ಸಿದ್ದನಾಮಿಕ್ಸ್ ಎಂದ ಕುಮಾರಸ್ವಾಮಿ: ಸಿದ್ ಎಕನಾಮಿಕ್ಸ್ ಏನೆಂದು ವಿವರಿಸಿದ ಸಿಎಂ

ಸದನದಲ್ಲಿ ಸಿದ್ದನಾಮಿಕ್ಸ್ ಎಂದ ಕುಮಾರಸ್ವಾಮಿ: ಸಿದ್ ಎಕನಾಮಿಕ್ಸ್ ಏನೆಂದು ವಿವರಿಸಿದ ಸಿಎಂ

ಬಹುಧರ್ಮ, ಬಹುಸಂಸ್ಕೃತಿ ಮತ್ತು ಬಹುಭಾಷೆಗಳನ್ನೊಳಗೊಂಡ ಬಹುತ್ವವನ್ನು ಗೌರವಿಸುವ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್

ಬೆಂಗಳೂರು: ಸದನದಲ್ಲಿ ಮಾಜಿ ಸಿಎಂ ಸಿದ್ ಎಕಾನಮಿಕ್ಸ್ ಎಂದು ಹೇಳಿದ್ದಕ್ಕೆ ಸಿಎಂ ಸಿದ್ದರಾಮಯ್ಯ, ಇಸು ಸಿದ್ ಎಕಾನಮಿಕ್ಸ್ ಎಂದಿದ್ದು, ಸಿದ್ ಎಕಾನಮಿಕ್ಸ್ ಎಂದರೆ ಏನೆಂದು ವಿವರಣೆ ನೀಡಿದ್ದಾರೆ. ಸರ್ವರನ್ನೂ ಒಳಗೊಂಡಿರುವ, ಸರ್ವರನ್ನೂ ಬೆಸೆಯುವ ಮತ್ತು ಸರ್ವರಿಗೂ ಸಮಪಾಲು – ಸಮಬಾಳು ನೀಡುವುದನ್ನೇ ಗುರಿಯಾಗಿಟ್ಟುಕೊಂಡ ಸರ್ವೋದಯ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

ಕಾಯಕದ ಮಹತ್ವವನ್ನು ವಿಶ್ವಕ್ಕೆ ಸಾರಿದ ಬಸವಣ್ಣ, ಗ್ರಾಮ ಸ್ವರಾಜ್ಯದ ಹರಿಕಾರ ಮಹಾತ್ಮ ಗಾಂಧೀಜಿ ಮತ್ತು ಸಾಮಾಜಿಕ ಪ್ರಜಾಪ್ರಭುತ್ವ ಸ್ಥಾಪನೆಯ ಎಚ್ಚರಿಕೆಯ ಸಂದೇಶ ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳ ಮೂಸೆಯಿಂದ ರೂಪುಗೊಂಡ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್ ಎಂದಿದ್ದಾರೆ.

ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ಎಲ್ಲ ಜಾತಿ-ಧರ್ಮಗಳ ಬಡವರ ಜೊತೆಗಿನ ಒಡನಾಟದ ಅನುಭವದ ಮೂಲಕ ರೂಪುಗೊಂಡ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್ ಎಂದು ಸಿಎಂ ವಿವರಣೆ ನೀಡಿದ್ದಾರೆ.

ಜನರ ಬೆವರಗಳಿಕೆಯ ತೆರಿಗೆ ಹಣದ ಪೈಸೆ ಪೈಸೆ ಕೂಡಾ ಆ ಜನರ ಕಲ್ಯಾಣಕ್ಕಾಗಿಯೇ ವಿನಿಯೋಗವಾಗಬೇಕು ಎನ್ನುವ ಎಚ್ಚರ ಮತ್ತು ನುಡಿದಂತೆ ನಡೆಯುವ ಬದ್ಧತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ಒಳಗೊಂಡ ಅಭಿವೃದ್ಧಿ ಮಾದರಿಯೇ ಸಿದ್ ಎಕನಾಮಿಕ್ಸ್ ಎಂದು ಸಿಎಂ ಸಿದ್ದರಾಮಯ್ಯ ಮಾಧ್ಯಮ ಹೇಳಿಕೆಯಲ್ಲಿ‌ ತಿಳಿಸಿದ್ದಾರೆ.

Join Whatsapp
Exit mobile version