Home ಟಾಪ್ ಸುದ್ದಿಗಳು ಕೂಳೂರು ಹಳೆ ಸೇತುವೆ ದುರಸ್ತಿ: ಆ. 19ರಿಂದ ಘನ ವಾಹನ ಸಂಚಾರ ನಿರ್ಬಂಧ

ಕೂಳೂರು ಹಳೆ ಸೇತುವೆ ದುರಸ್ತಿ: ಆ. 19ರಿಂದ ಘನ ವಾಹನ ಸಂಚಾರ ನಿರ್ಬಂಧ

ಮಂಗಳೂರು: ಮಂಗಳೂರು – ಉಡುಪಿ ಸಂಪರ್ಕದ ಕೂಳೂರು ಹಳೆಯ ಕಮಾನು ಸೇತುವೆಯ ದುರಸ್ತಿ ಹಿನ್ನೆಲೆಯಲ್ಲಿ ಹಗಲು ವೇಳೆಯಲ್ಲಿ ಘನ ವಾಹನಗಳ ಸಂಚಾರವನ್ನು 3 ದಿನಗಳ ಕಾಲ ನಿರ್ಬಂಧಿಸಲು ದ.ಕ. ಜಿಲ್ಲಾಡಳಿತ ನಿರ್ಧರಿಸಿದೆ.


ಆ. 19, 20 ಹಾಗೂ 21ರಂದು ಘನ ವಾಹನಗಳು ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಹಾಗೂ ಬೆಳಗ್ಗೆ 11ರಿಂದ ಅಪರಾಹ್ನ 3ರ ವರೆಗೆ ಮಾತ್ರ ಪಕ್ಕದಲ್ಲಿರುವ ಹೊಸ ಸೇತುವೆಯಲ್ಲಿ ಸಂಚರಿಸಬಹುದು. ಈ ಅವಧಿಯಲ್ಲಿ ಹೊಸ ಸೇತುವೆಯನ್ನು ಘನ ವಾಹನಗಳ ದ್ವಿಮುಖ ಸಂಚಾರಕ್ಕೆ ಬಳಸಲಾಗುತ್ತದೆ.


ಈ ದಿನಗಳಲ್ಲಿ ಬೆಳಗ್ಗೆ 6ರಿಂದ 11ರ ವರೆಗೆ ಹಾಗೂ ಅಪರಾಹ್ನ 3ರಿಂದ ರಾತ್ರಿ 10 ಗಂಟೆಯವರೆಗೆ ಉಡುಪಿಯಿಂದ ಕೇರಳ ಕಡೆಗೆ ಸಂಚರಿಸುವ ಘನ ವಾಹನಗಳು ಮೂಲ್ಕಿ- ಸುರತ್ಕಲ್- ಎಂಆರ್ ಪಿಎಲ್, ಬಜ್ಪೆ, ಕೆಪಿಟಿ, ನಂತೂರು ಮಾರ್ಗವಾಗಿ ಸಾಗಬಹುದು.


ಈ ಪ್ರಾಯೋಗಿಕ ಸಂಚಾರ ನಡೆಸಿದ ಅನಂತರ ಅಗತ್ಯ ಮಾರ್ಪಾ ಡುಗಳಿದ್ದಲ್ಲಿ ಈ ನಿರ್ಬಂಧವನ್ನು ಆ. 25ರಿಂದ ಮುಂದಿನ ತಿಂಗಳು ಅ. 25ರ ವರೆಗೆ ವಿಸ್ತರಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

Join Whatsapp
Exit mobile version