ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿಯಲ್ಲಿ ಹಿಂದೂಯೇತರರಿಗೆ ವ್ಯಾಪಾರ ನಿಷೇಧ

ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸಂಘಪರಿವಾರದ ಕಾರ್ಯಕರ್ತರು ಹಿಂದೂಯೇತರರ ವ್ಯಾಪಾರ ನಿಷೇಧದ ಬ್ಯಾನರ್ ಹಾಕಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.


ಚಂಪಾಷಷ್ಠಿ ಸಂದರ್ಭದಲ್ಲಿ ಅನ್ಯ ಧರ್ಮೀಯ ವರ್ತಕರು ವ್ಯಾಪಾರ ನಡೆಸುವುದರ ಮೇಲೆ ನಿಷೇಧ ಹೇರಲಾಗಿದೆ ಎಂಬ ಬ್ಯಾನರ್ ಹಾಕಲಾಗಿದೆ.

- Advertisement -


ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮುಜರಾಯಿ ಇಲಾಖೆಗೆ ಸೇರಿದೆ. ಕುಕ್ಕೆಯಲ್ಲಿ ಚಂಪಾ ಷಷ್ಠಿ, ಬ್ರಹ್ಮರಥೋತ್ಸವ ನವೆಂಬರ್ 29ರಂದು
ನಡೆಯಲಿದ್ದು, ಅನ್ಯ ಧರ್ಮೀಯರು ದೇವಸ್ಥಾನದ ಜಾತ್ರೆಗಳಲ್ಲಿ ಮಳಿಗೆ ಹಾಕುತ್ತಿದ್ದರು.