Home ಟಾಪ್ ಸುದ್ದಿಗಳು ಮಂಗಳೂರು: ಗುತ್ತಿಗೆ ಆಧಾರದಲ್ಲಿ KSRTC ಬಸ್ ಚಾಲಕರ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಮಂಗಳೂರು: ಗುತ್ತಿಗೆ ಆಧಾರದಲ್ಲಿ KSRTC ಬಸ್ ಚಾಲಕರ ನೇರ ನೇಮಕಾತಿಗೆ ಅರ್ಜಿ ಆಹ್ವಾನ

ಸಾಂದರ್ಭಿಕ ಚಿತ್ರ(KSRTC)

ಮಂಗಳೂರು: ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಕಗೊಳಿಸುವ ಪ್ರಕ್ರಿಯೆಗೆ ಅರ್ಜಿ ಆಹ್ವಾನಿಸಲಾಗಿದೆ.

ದ.ಕ. ಹಾಗೂ ಉಡುಪಿ ಜಿಲ್ಲೆಯ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಆಗಸ್ಟ್ 22ರ ಮಂಗಳವಾರದಂದು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಇಂದಿರಾಗಾಂಧಿ ಜನ್ಮಶತಾಬ್ದಿ ಭವನದ ಕೆಳ ಅಂತಸ್ಥಿನಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಬೆಳಗ್ಗೆ 10 ಗಂಟೆಯಿಂದ 1ಗಂಟೆಯ ತನಕ ಅವಕಾಶ ಕಲ್ಪಿಸಲಾಗಿದೆ.

ಸಲ್ಲಿಸಬೇಕಾದ ದಾಖಲೆಗಳು:

ಆಧಾರ್ ಕಾರ್ಡ್
ವಾಹನ ಚಾಲನಾ ಪರವಾಣಿಗೆ ಪತ್ರ
ಭಾರೀ ಗಾತ್ರದ ವಾಹನ ಚಾಲನೆ ಅನುಜ್ಞಾ ಪತ್ರ
4 ಪಾಸ್ ಪೋರ್ಟ್ ಫೋಟೊ
7ನೇ ತರಗತಿ ಮೇಲ್ಪಟ್ಟ ತೇರ್ಗಡೆಯಾದ ಅಂಕಪಟ್ಟಿ

Join Whatsapp
Exit mobile version